Karnataka Budget 2026 PDF: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನ ಸಂಪೂರ್ಣ ಪ್ರತಿ ಬಿಡುಗಡೆ; ಅಧಿಕೃತ PDF ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ

Telegram Group Join Now
WhatsApp Group Join Now

“ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ” ಎಂಬ ಧ್ಯೇಯವಾಕ್ಯದಡಿ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 6, 2026) ರಾಜ್ಯದ 2026-27ನೇ ಸಾಲಿನ ಬೃಹತ್ ಆಯವ್ಯಯವನ್ನು ಮಂಡಿಸಿದ್ದಾರೆ. ಇದು ಅವರ ದಾಖಲೆಯ 17ನೇ ಬಜೆಟ್ ಆಗಿದೆ.

ಬಜೆಟ್‌ನಲ್ಲಿ ಕೃಷಿ, ನೀರಾವರಿ, ಶಿಕ್ಷಣ, ಹೈನುಗಾರಿಕೆ, ಮೀನುಗಾರಿಕೆ ಹಾಗೂ ಬೆಂಗಳೂರು ನಗರಾಭಿವೃದ್ಧಿಗೆ (ಟನಲ್ ರಸ್ತೆ, ನಮ್ಮ ಮೆಟ್ರೋ) ಭರ್ಜರಿ ಕೊಡುಗೆಗಳನ್ನು ಘೋಷಿಸಲಾಗಿದೆ. ಪೂರ್ಣ ಪ್ರಮಾಣದ ಬಜೆಟ್ ಭಾಷಣದಲ್ಲಿ ಏನಿದೆ? ನಿಮ್ಮ ಜಿಲ್ಲೆಗೆ, ನಿಮ್ಮ ಕ್ಷೇತ್ರಕ್ಕೆ ಏನೆಲ್ಲಾ ಸಿಕ್ಕಿದೆ? ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಹಣ ಮೀಸಲಿಡಲಾಗಿದೆ? ಎನ್ನುವುದನ್ನು ಸಂಪೂರ್ಣವಾಗಿ ಓದಲು ಹಾಗೂ ವಿಶ್ಲೇಷಿಸಲು ‘ಬಜೆಟ್ ಕಾಪಿ’ಯ (Karnataka Budget 2026 PDF) ಅಗತ್ಯವಿದೆ.

ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯು (Finance Department) ಬಜೆಟ್ ಮಂಡನೆಯಾದ ಬೆನ್ನಲ್ಲೇ ಅಧಿಕೃತ ಬಜೆಟ್ ಪ್ರತಿಯನ್ನು ಪಿಡಿಎಫ್ (PDF) ರೂಪದಲ್ಲಿ ಸಾರ್ವಜನಿಕರ ಓದಿಗಾಗಿ ಬಿಡುಗಡೆ ಮಾಡಿದೆ.

How to Download Karnataka Budget 2026 PDF:

ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು ಈ ಕೆಳಗಿನ ಸರಳ ವಿಧಾನಗಳ ಮೂಲಕ ಅಧಿಕೃತ ಬಜೆಟ್ ಪ್ರತಿಯನ್ನು ಉಚಿತವಾಗಿ ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಧಿಕೃತ ವೆಬ್‌ಸೈಟ್ finance.karnataka.gov.in ಗೆ ಭೇಟಿ ನೀಡಿ.
  2. ಬಜೆಟ್ ಲಿಂಕ್ ಕ್ಲಿಕ್ ಮಾಡಿ: ಮುಖಪುಟದಲ್ಲಿ (Home Page) ಹೊಸದಾಗಿ ಅಪ್‌ಡೇಟ್ ಆಗಿರುವ ‘State Budget 2026-27’ (ರಾಜ್ಯ ಆಯವ್ಯಯ 2026-27) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ಭಾಷೆ ಆಯ್ಕೆ ಮಾಡಿ: ಅಲ್ಲಿ ‘ಬಜೆಟ್ ಭಾಷಣ’ (Budget Speech) ವಿಭಾಗದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯ ಆಯ್ಕೆಗಳಿರುತ್ತವೆ. ನಿಮಗೆ ಬೇಕಾದ ಭಾಷೆಯ ಮೇಲೆ ಕ್ಲಿಕ್ ಮಾಡಿದರೆ, 200ಕ್ಕೂ ಹೆಚ್ಚು ಪುಟಗಳ ಸಂಪೂರ್ಣ ಬಜೆಟ್ ಕಾಪಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ಗೆ PDF ರೂಪದಲ್ಲಿ ಡೌನ್‌ಲೋಡ್ ಆಗುತ್ತದೆ. ಅಥವಾ ಇಲ್ಲಿ ಕೇಳಗೆ ನೀಡಲಾಗಿರುವ ಲಿಂಕ್‌ ಮೂಲಕ ಕೂಡ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಈ ಬಜೆಟ್ ಪ್ರತಿಯಲ್ಲಿ ಏನೇನಿದೆ?:

  • ಮುಖ್ಯಮಂತ್ರಿಗಳ ಸಂಪೂರ್ಣ 17ನೇ ಬಜೆಟ್ ಭಾಷಣದ ಯಥಾವತ್ ಪ್ರತಿ.
  • ’11G’ ಆರ್ಥಿಕ ಮಾದರಿ, ಗ್ಯಾರಂಟಿ ಯೋಜನೆಗಳ ಅನುದಾನದ ನಿಖರ ವಿವರ (ಉದಾ: ಗೃಹಲಕ್ಷ್ಮಿಗೆ 28,608 ಕೋಟಿ ರೂ.).
  • ವಿವಿಧ ಇಲಾಖೆಗಳಿಗೆ (ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಶಿಕ್ಷಣ ಇತ್ಯಾದಿ) ಹಂಚಿಕೆಯಾದ ಅನುದಾನದ ಸ್ಪಷ್ಟ ಅಂಕಿ-ಅಂಶಗಳು.
  • ಹೊಸ ಯೋಜನೆಗಳಾದ ಕೋಲಾರದ ‘ರೈತ ಮಾಲ್’, ಗ್ರಾಮ ಪಂಚಾಯಿತಿಗಳ ‘ಫಲಧಾರೆ ಶಿಬಿರ’, ಮತ್ಸ್ಯದರ್ಶಿನಿ, ಮತ್ತು 5 ಕಡೆ ಸ್ಥಾಪನೆಯಾಗಲಿರುವ ‘ಸಿಲ್ಕ್ ಪಾರ್ಕ್’ಗಳ ಅಧಿಕೃತ ಘೋಷಣೆಗಳ ವಿವರಗಳು.

ಕೆಪಿಎಸ್‌ಸಿ (KPSC), ಕೆಎಎಸ್ (KAS), ಪಿಎಸ್‌ಐ (PSI) ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಮಾರುಕಟ್ಟೆಯಲ್ಲಿ ಸಿಗುವ ಖಾಸಗಿ ನೋಟ್ಸ್‌ಗಳಿಗಿಂತ, ಸರ್ಕಾರದ ಈ ಅಧಿಕೃತ ಬಜೆಟ್ ಪ್ರತಿಯನ್ನು (PDF) ಡೌನ್‌ಲೋಡ್ ಮಾಡಿಕೊಂಡು ಓದುವುದು ಅತ್ಯಂತ ಸೂಕ್ತ. ಇದರಲ್ಲಿರುವ ಸರ್ಕಾರದ ಅಧಿಕೃತ ಅಂಕಿ-ಅಂಶಗಳು ಹಾಗೂ ಹೊಸ ಯೋಜನೆಗಳ ವಿವರಗಳು ಮುಂಬರುವ ಪರೀಕ್ಷಾ ದೃಷ್ಟಿಯಿಂದ ಬಹುಮುಖ್ಯವಾಗಿರುತ್ತವೆ.

Karnataka Budget 2026: Download PDF

 ಇದನ್ನೂ ಓದಿ: ಕರ್ನಾಟಕ ಬಜೆಟ್ 2026-27: ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಭರ್ಜರಿ ಉತ್ತೇಜನ

ಇದನ್ನೂ ಓದಿ: Karnataka Budget 2026-27: ಅನ್ನದಾತನಿಗೆ ಭರ್ಜರಿ ಕೊಡುಗೆ; ‘ರೈತ ಮಾಲ್’ ಸ್ಥಾಪನೆ,

 ಇದನ್ನೂ ಓದಿ: FRUITS e-KYC Karnataka: ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಫ್ರೂಟ್ಸ್ ‘e-KYC’ ಮಾಡಿ

Telegram Group Join Now
WhatsApp Group Join Now

Leave a Comment