SSLC Exam Postpone: ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿಢೀರ್ ಮುಂದೂಡಿಕೆ; ಹೊಸ ದಿನಾಂಕ ಪ್ರಕಟ

Telegram Group Join Now
WhatsApp Group Join Now

ರಾಜ್ಯ ಸರ್ಕಾರವು ಮಹಾವೀರ ಜಯಂತಿ ರಜಾ ದಿನಾಂಕವನ್ನು ದಿಢೀರ್ ಆಗಿ ಬದಲಾಯಿಸಿದ ಬೆನ್ನಲ್ಲೇ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ವೇಳಾಪಟ್ಟಿಯಲ್ಲೂ ಮಹತ್ವದ ಬದಲಾವಣೆ (SSLC Exam Postpone) ಮಾಡಿ ಅಧಿಕೃತ ಸುತ್ತೋಲೆ ಹೊರಡಿಸಿದೆ.

ಮಾರ್ಚ್ 30 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಒಂದು ದಿನ ಮುಂದೂಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಬದಲಾವಣೆಯನ್ನು ಕಡ್ಡಾಯವಾಗಿ ಗಮನಿಸಬೇಕಿದೆ.

ಯಾವ ಪರೀಕ್ಷೆ ಮುಂದೂಡಿಕೆಯಾಗಿದೆ? ಹೊಸ ದಿನಾಂಕ ಯಾವುದು? ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ:

ಯಾವ ಪರೀಕ್ಷೆ ಬದಲಾಗಿದೆ? ಹಿಂದಿನ ವೇಳಾಪಟ್ಟಿಯ ಪ್ರಕಾರ ಮಾರ್ಚ್ 30, 2026 ರಂದು (ಸೋಮವಾರ) ‘ತೃತೀಯ ಭಾಷೆ’ (Third Language) ವಿಷಯದ ಪರೀಕ್ಷೆ ನಡೆಯಬೇಕಿತ್ತು. ಆದರೆ ಅಂದು ಮಹಾವೀರ ಜಯಂತಿಯ ಸಾರ್ವತ್ರಿಕ ರಜೆ ಘೋಷಣೆಯಾಗಿರುವುದರಿಂದ, ಈ ಪರೀಕ್ಷೆಯನ್ನು ಮಾರ್ಚ್ 31, 2026ರ ಮಂಗಳವಾರಕ್ಕೆ ಮುಂದೂಡಲಾಗಿದೆ. ಮಂಗಳವಾರದಂದು ಈಗಾಗಲೇ ನಿಗದಿಪಡಿಸಿರುವ ಸಮಯದಲ್ಲೇ ಈ ಪರೀಕ್ಷೆ ನಡೆಯಲಿದೆ.

ಉಳಿದ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ: ವಿದ್ಯಾರ್ಥಿಗಳು ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಕೇವಲ ತೃತೀಯ ಭಾಷಾ ಪರೀಕ್ಷೆಯ ದಿನಾಂಕ ಮಾತ್ರ ಬದಲಾಗಿದ್ದು, ಉಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ಹಳೆಯ ವೇಳಾಪಟ್ಟಿಯಂತೆಯೇ ಯಥಾವತ್ತಾಗಿ ನಡೆಯಲಿವೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಪರೀಕ್ಷಾಧಿಕಾರಿಗಳಿಗೆ ಪ್ರಮುಖ ಸೂಚನೆ: (ಪ್ರಶ್ನೆಪತ್ರಿಕೆ ಮೇಲಿರಲಿದೆ ಹಳೆಯ ದಿನಾಂಕ!) ಈ ದಿಢೀರ್ ಬದಲಾವಣೆಯಿಂದಾಗಿ, ತೃತೀಯ ಭಾಷೆಯ ಪ್ರಶ್ನೆಪತ್ರಿಕೆಯ ಪ್ಯಾಕೆಟ್ ಮೇಲೆ ಹಾಗೂ ಪ್ರಶ್ನೆಪತ್ರಿಕೆಯ ಒಳಗಡೆ ಮುದ್ರಣವಾಗಿರುವ ದಿನಾಂಕ ‘30.03.2026’ ಎಂದೇ ಇರಲಿದೆ. ಹೀಗಾಗಿ ಮಂಗಳವಾರ ಪರೀಕ್ಷೆ ಬರೆಯುವಾಗ ಪ್ರಶ್ನೆಪತ್ರಿಕೆ ವಿತರಿಸುವ ಸಂದರ್ಭದಲ್ಲಿ ಕೊಠಡಿ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳು ಹಳೆಯ ದಿನಾಂಕವನ್ನು ನೋಡಿ ಗೊಂದಲಕ್ಕೊಳಗಾಗಬಾರದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

ಈ ದಿನಾಂಕ ಬದಲಾವಣೆಯ ಮಾಹಿತಿಯನ್ನು ಎಲ್ಲಾ ಶಾಲೆಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳು ಮತ್ತು ಪೋಷಕರ ಗಮನಕ್ಕೆ ತಕ್ಷಣವೇ ತರುವಂತೆ ಸೂಚಿಸಲಾಗಿದೆ. ಹಾಗೂ ಹೊಸ ದಿನಾಂಕದಂದು ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಂಡಳಿ ಮನವಿ ಮಾಡಿದೆ.

Telegram Group Join Now
WhatsApp Group Join Now

Leave a Comment