“ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ” ಎಂಬ ಪ್ರಬಲ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಬಜೆಟ್ನಲ್ಲಿ ಸೂರು ಇಲ್ಲದ ಬಡವರಿಗೆ ಹಾಗೂ ಸ್ವಂತ ನಿವೇಶನದ (Housing Scheme) ಕನಸು ಕಾಣುತ್ತಿರುವ ಮಧ್ಯಮ ವರ್ಗದ ಜನತೆಗೆ ಭರ್ಜರಿ ಕೊಡುಗೆ ನೀಡಲಾಗಿದೆ.
ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೇರ ಅನುಕೂಲ ಕಲ್ಪಿಸುವ ವಸತಿ ವಲಯಕ್ಕೆ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡಲಾಗಿದ್ದು, ಪ್ರಮುಖ ಘೋಷಣೆಗಳ ಅಧಿಕೃತ ಮಾಹಿತಿ ಇಲ್ಲಿದೆ:
1. ಈ ವರ್ಷ 3 ಲಕ್ಷ ಮನೆಗಳ ನಿರ್ಮಾಣದ ಬೃಹತ್ ಗುರಿ!
- ಬಡವರ ಸ್ವಂತ ಮನೆಯ ಕನಸನ್ನು ನನಸು ಮಾಡಲು ಸರ್ಕಾರ ವೇಗ ಹೆಚ್ಚಿಸಿದ್ದು, ಪ್ರಸಕ್ತ 2026-27ನೇ ಸಾಲಿನಲ್ಲಿ ಬರೋಬ್ಬರಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ.
- ವಿಶೇಷವೆಂದರೆ, ಹಿಂದಿನ ಸರ್ಕಾರವು ಯಾವುದೇ ಅನುದಾನ ನೀಡದೇ ಕೇವಲ ಮಂಜೂರಾತಿ ನೀಡಿದ್ದ 4.90 ಲಕ್ಷ ಮನೆಗಳನ್ನು ಸಹ ಇದೀಗ ಅಗತ್ಯ ಅನುದಾನ ಒದಗಿಸಿ ಪೂರ್ಣಗೊಳಿಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
2. ‘ನಮ್ಮ ಮನೆ’ ಯೋಜನೆಯಡಿ ರಿಯಾಯಿತಿ ದರದಲ್ಲಿ 50,000 ನಿವೇಶನಗಳು:
- ಸ್ವಂತ ಸೈಟ್ ಖರೀದಿಸಲು ಪರದಾಡುತ್ತಿರುವ ಜನತೆಗೆ ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ಬಂಪರ್ ಆಫರ್ ನೀಡಲಾಗಿದೆ.
- ಕೆ.ಹೆಚ್.ಬಿ. ವತಿಯಿಂದ ‘ನಮ್ಮ ಮನೆ’ ಯೋಜನೆಯಡಿಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಬರೋಬ್ಬರಿ 50,000 ನಿವೇಶನಗಳನ್ನು (Sites) ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು ಎಂದು ಬಜೆಟ್ನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.
3. ಬೆಂಗಳೂರಿಗರಿಗೆ ಗಿಫ್ಟ್: ಆನೇಕಲ್ನಲ್ಲಿ ‘ಸೂರ್ಯ ಕ್ರೀಡಾ ಗ್ರಾಮ’ ನಿರ್ಮಾಣ!
- ಕ್ರೀಡಾ ಪ್ರೇಮಿಗಳಿಗೆ ಹಾಗೂ ಬೆಂಗಳೂರು ನಗರದ ಜನತೆಗೆ ಬಜೆಟ್ನಲ್ಲಿ ಬಹುದೊಡ್ಡ ಉಡುಗೊರೆ ಸಿಕ್ಕಿದೆ.
- ‘ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮ’ (KHB Surya Sports Village) ಎಂಬ ಹೆಸರಿನಲ್ಲಿ ಕರ್ನಾಟಕ ಗೃಹ ಮಂಡಳಿಯ ವತಿಯಿಂದಲೇ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ತಲೆ ಎತ್ತಲಿದೆ.
- ಇಲ್ಲಿ ಬರೋಬ್ಬರಿ 80,000 ಆಸನ ಸಾಮರ್ಥ್ಯವುಳ್ಳ ‘ಕ್ರಿಕೆಟ್ ಕ್ರೀಡಾಂಗಣ’ ಹಾಗೂ ಇತರೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ನಡೆಸಲು ಅನುಕೂಲವಾಗುವಂತೆ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗುವುದು.
- ಇದನ್ನೂ ಓದಿ: ಕರ್ನಾಟಕ ಬಜೆಟ್ 2026-27: ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಭರ್ಜರಿ ಉತ್ತೇಜನ
- ಇದನ್ನೂ ಓದಿ: Karnataka Budget 2026-27: ಅನ್ನದಾತನಿಗೆ ಭರ್ಜರಿ ಕೊಡುಗೆ; ‘ರೈತ ಮಾಲ್’ ಸ್ಥಾಪನೆ,
- ಇದನ್ನೂ ಓದಿ: FRUITS e-KYC Karnataka: ಮನೆಯಲ್ಲೇ ಕುಳಿತು ಮೊಬೈಲ್ನಲ್ಲೇ ಫ್ರೂಟ್ಸ್ ‘e-KYC’ ಮಾಡಿ