ಹೆಚ್ಚುತ್ತಿರುವ ಜನಸಂಖ್ಯೆ, ಟ್ರಾಫಿಕ್ ದಟ್ಟಣೆ, ಅಪರಾಧಗಳ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಬಜೆಟ್ನಲ್ಲಿ ಗೃಹ ಇಲಾಖೆಗೆ ಭರ್ಜರಿ ಅನುದಾನ ಮೀಸಲಿಡಲಾಗಿದೆ. ರಾಜ್ಯದ ನಾಗರಿಕರ ಸುರಕ್ಷತೆ ಮತ್ತು ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಒತ್ತು ನೀಡಿರುವ ಸರ್ಕಾರ, ಹೊಸದಾಗಿ 12 ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಿದೆ.
8,000 ಪೊಲೀಸ್ ಹುದ್ದೆಗಳಿಗೆ ನೇಮಕಾತಿ ಗ್ರೀನ್ ಸಿಗ್ನಲ್: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಒಟ್ಟು 8,000 ಹುದ್ದೆಗಳನ್ನು ಇದೇ ವರ್ಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. ವಿಶೇಷವೆಂದರೆ, ನೇಮಕಾತಿ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ, ಅತ್ಯಂತ ಪಾರದರ್ಶಕವಾಗಿ ನಡೆಸಲು ‘ಖಾಯಂ ಪೊಲೀಸ್ ಮತ್ತು ಪೊಲೀಸ್ ಪೂರಕ ಸೇವೆಗಳ ನೇಮಕಾತಿ ಮಂಡಳಿ’ಯನ್ನು (Permanent Recruitment Board) ಹೊಸದಾಗಿ ಸ್ಥಾಪಿಸಲಾಗುವುದು ಎಂದು ಬಜೆಟ್ನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.
ರಾಜ್ಯಕ್ಕೆ ಮಂಜೂರಾದ 12 ಹೊಸ ಪೊಲೀಸ್ ಠಾಣೆಗಳ ಪಟ್ಟಿ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿನ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಠಾಣೆಗಳನ್ನು ಮಂಜೂರು ಮಾಡಲಾಗಿದೆ. ಹೊಸ ಠಾಣೆಗಳಿಗೆ ಸುಸಜ್ಜಿತ ಕಟ್ಟಡ ಮತ್ತು ಆಧುನಿಕ ಉಪಕರಣಗಳನ್ನು ಒದಗಿಸಲು ಪ್ರತ್ಯೇಕ ಅನುದಾನ ನೀಡಲಾಗಿದೆ. ಯಾವ ಜಿಲ್ಲೆಗೆ ಯಾವ ಠಾಣೆ ಸಿಕ್ಕಿದೆ? ಇಲ್ಲಿದೆ ಅಧಿಕೃತ ವಿವರ:
New Police Stations:
- ಬೆಳಗಾವಿ: ಯರಗಟ್ಟಿ ಪೊಲೀಸ್ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ)
- ದಕ್ಷಿಣ ಕನ್ನಡ: ಮಾಣಿ ಪೊಲೀಸ್ ಠಾಣೆ ಹಾಗೂ ಸಜಿಪನಡು ಪೊಲೀಸ್ ಠಾಣೆ
- ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ಸಂಚಾರಿ ಠಾಣೆ (Traffic)
- ಚಿತ್ರದುರ್ಗ: ಹಿರಿಯೂರು ಸಂಚಾರ ಪೊಲೀಸ್ ಠಾಣೆ (Traffic)
- ಚಾಮರಾಜನಗರ: ಗುಂಡ್ಲುಪೇಟೆ ಸಂಚಾರ ಠಾಣೆ (Traffic)
- ಯಾದಗಿರಿ: ಕಕ್ಕೇರಾ ಪೊಲೀಸ್ ಠಾಣೆ
- ದಾವಣಗೆರೆ: ಆನಗೋಡು ಪೊಲೀಸ್ ಠಾಣೆ
- ಹಾವೇರಿ: ತಿಳುವಳ್ಳಿ ಪೊಲೀಸ್ ಠಾಣೆ
- ಮೈಸೂರು: ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ
- ವಿಜಯಪುರ: ಮುದ್ದೇಬಿಹಾಳ ಗ್ರಾಮಾಂತರ ಠಾಣೆ
- ಕೋಲಾರ: ನರಸಾಪುರ ಕೈಗಾರಿಕಾ ವಲಯ ಠಾಣೆ (ಕೈಗಾರಿಕಾ ಸುರಕ್ಷತೆ)
ಬೆಳಗಾವಿ ಸುವರ್ಣ ಸೌಧದಲ್ಲಿ ಬೃಹತ್ ಪೊಲೀಸ್ ಬ್ಯಾರಕ್: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಭದ್ರತೆಗೆ ನಿಯೋಜನೆಗೊಳ್ಳುವ 1,000 ಪೊಲೀಸ್ ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ 20 ಕೋಟಿ ರೂ. ವೆಚ್ಚದಲ್ಲಿ ‘ಸುಸಜ್ಜಿತ ಖಾಯಂ ಬ್ಯಾರಕ್’ ನಿರ್ಮಿಸಲು ಬಜೆಟ್ನಲ್ಲಿ ಅನುದಾನ ಒದಗಿಸಲಾಗಿದೆ. ಇದರ ಜೊತೆಗೆ, ರಾಜ್ಯಾದ್ಯಂತ ಪೊಲೀಸ್ ಸಿಬ್ಬಂದಿಗೆ ಸುಸಜ್ಜಿತ ವಸತಿ ಸೌಕರ್ಯ ಕಲ್ಪಿಸಲು ಹೊಸ ವಸತಿಗೃಹಗಳ ನಿರ್ಮಾಣಕ್ಕೆ 250 ಕೋಟಿ ರೂ. ಮೀಸಲಿಡಲಾಗಿದೆ.
ಜೈಲಿನಲ್ಲಿ AI ತಪಾಸಣೆ, ಅಗ್ನಿಶಾಮಕ ಸಿಬ್ಬಂದಿಗೆ ಗುಡ್ ನ್ಯೂಸ್:
- ಕಾರಾಗೃಹಗಳಲ್ಲಿ (Jails) ಅಕ್ರಮ ಮೊಬೈಲ್ ಬಳಕೆ ಮತ್ತು ಮಾದಕ ದ್ರವ್ಯ ಸರಬರಾಜು ತಡೆಗಟ್ಟಲು 20 ಕೋಟಿ ರೂ. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ತಪಾಸಣಾ ವ್ಯವಸ್ಥೆ ಹಾಗೂ ಸಿಬ್ಬಂದಿಗೆ ‘ಬಾಡಿ ವೋರ್ನ್ ಕ್ಯಾಮೆರಾ’ (Body Worn Cameras) ಅಳವಡಿಸಲಾಗುವುದು.
- ಇಲಾಖೆಯ ಸಂವಹನ ಮತ್ತು ಫೋರೆನ್ಸಿಕ್ ಸಾಮರ್ಥ್ಯ ಹೆಚ್ಚಿಸಲು ಹಾಗೂ ಸೈಬರ್ ಅಪರಾಧಗಳನ್ನು ಕಟ್ಟುನಿಟ್ಟಾಗಿ ತಡೆಯಲು ಹೊಸ ವಾಹನ, ಸಾಫ್ಟ್ವೇರ್ ಖರೀದಿ ಮತ್ತು ತರಬೇತಿಗಾಗಿ 75 ಕೋಟಿ ರೂ. ನೀಡಲಾಗಿದೆ.
- ತುರ್ತು ಸಂದರ್ಭಗಳಲ್ಲಿ ಹಗಲಿರುಳು ಜೀವದ ಹಂಗು ತೊರೆದು ಶ್ರಮಿಸುವ ಅಗ್ನಿಶಾಮಕ ದಳದ ಸಿಬ್ಬಂದಿಗಳ ಆಹಾರ ಭತ್ಯೆಯನ್ನು (Food Allowance) 150 ರೂ. ಗಳಿಂದ 300 ರೂ. ಗಳಿಗೆ ದ್ವಿಗುಣಗೊಳಿಸಿ ಸರ್ಕಾರ ಆದೇಶಿಸಿದೆ.
- ಇದನ್ನೂ ಓದಿ: Teacher Recruitment 2026: 15,000 ಶಿಕ್ಷಕರ ನೇಮಕಾತಿಗೆ ಗ್ರೀನ್ ಸಿಗ್ನಲ್
- ಇದನ್ನೂ ಓದಿ: ಕರ್ನಾಟಕ ಬಜೆಟ್ 2026-27: ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಭರ್ಜರಿ ಉತ್ತೇಜನ
- ಇದನ್ನೂ ಓದಿ: Karnataka Budget 2026-27: ಅನ್ನದಾತನಿಗೆ ಭರ್ಜರಿ ಕೊಡುಗೆ; ‘ರೈತ ಮಾಲ್’ ಸ್ಥಾಪನೆ,
- ಇದನ್ನೂ ಓದಿ: FRUITS e-KYC Karnataka: ಮನೆಯಲ್ಲೇ ಕುಳಿತು ಮೊಬೈಲ್ನಲ್ಲೇ ಫ್ರೂಟ್ಸ್ ‘e-KYC’ ಮಾಡಿ