ನ್ಯಾಯಾಂಗ ಇಲಾಖೆಯಲ್ಲಿ ಸರ್ಕಾರಿ ಕೆಲಸ ಮಾಡಬೇಕು ಎಂದು ಕನಸು ಕಾಣುತ್ತಿರುವ ಯುವಜನತೆಗೆ ಇಲ್ಲೊಂದು ಬಂಪರ್ ಅವಕಾಶ ಒದಗಿಬಂದಿದೆ. ಚಾಮರಾಜನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯು ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ (Chamarajanagara Court Recruitment 2026) ಅಧಿಸೂಚನೆ ಹೊರಡಿಸಿದೆ.
ಖಾಲಿ ಇರುವ ಹುದ್ದೆಗಳನ್ನು ‘ನೇರ ನೇಮಕಾತಿ’ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಎಸ್.ಎಸ್.ಎಲ್.ಸಿ (SSLC) ಹಾಗೂ ಪಿ.ಯು.ಸಿ (PUC) ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಹುದ್ದೆಗಳ ಸಂಪೂರ್ಣ ವಿವರ, ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಕಂಪ್ಲೀಟ್ ಮಾಹಿತಿ ಇಲ್ಲಿದೆ.
Chamarajanagara Court Recruitment 2026 ಹುದ್ದೆಗಳ ವಿವರ:
ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ:
- ಸೇವಕರು (Peon): 13 ಹುದ್ದೆಗಳು
- ಬೆರಳಚ್ಚುಗಾರರು (Typist): 06 ಹುದ್ದೆಗಳು (2 ಹಿಂಬಾಕಿ ಹುದ್ದೆ ಸೇರಿ)
- ಬೆರಳಚ್ಚು-ನಕಲುಗಾರರು (Typist-Copyist): 04 ಹುದ್ದೆಗಳು (2 ಹಿಂಬಾಕಿ ಹುದ್ದೆ ಸೇರಿ)
- ಶೀಘ್ರಲಿಪಿಗಾರರು ಗ್ರೇಡ್-III (Stenographer Grade-III): 02 ಹುದ್ದೆಗಳು (ಹಿಂಬಾಕಿ ಹುದ್ದೆಗಳು)
- ಒಟ್ಟು 25 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ:
- ಸೇವಕರು: ಕನಿಷ್ಠ ಎಸ್.ಎಸ್.ಎಲ್.ಸಿ (SSLC) ಪಾಸ್ ಆಗಿರಬೇಕು. ಜೊತೆಗೆ ಕನ್ನಡವನ್ನು ಓದಲು ಮತ್ತು ಬರೆಯಲು ಸ್ಪಷ್ಟವಾಗಿ ತಿಳಿದಿರಬೇಕು.
- ಬೆರಳಚ್ಚುಗಾರರು & ನಕಲುಗಾರರು: ದ್ವಿತೀಯ ಪಿ.ಯು.ಸಿ (PUC) ಅಥವಾ 3 ವರ್ಷದ ಡಿಪ್ಲೊಮಾ ಪಾಸ್ ಮಾಡಿರಬೇಕು. ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು (Typing) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
- ಶೀಘ್ರಲಿಪಿಗಾರರು: ಪಿ.ಯು.ಸಿ ಅಥವಾ ಡಿಪ್ಲೊಮಾ ಜೊತೆಗೆ ಹಿರಿಯ ದರ್ಜೆಯ ಶೀಘ್ರಲಿಪಿ (Shorthand) ಮತ್ತು ಬೆರಳಚ್ಚು ಪರೀಕ್ಷೆಯಲ್ಲಿ ಪಾಸಾಗಿರಬೇಕು.
ವೇತನ ಶ್ರೇಣಿ (Salary Details):
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಅತ್ಯುತ್ತಮ ವೇತನ ಸಿಗಲಿದೆ:
- ಶೀಘ್ರಲಿಪಿಗಾರರು: ಮಾಸಿಕ ರೂ. 44,425 ರಿಂದ 83,700 ವರೆಗೆ.
- ಬೆರಳಚ್ಚುಗಾರರು / ಬೆರಳಚ್ಚು-ನಕಲುಗಾರರು: ಮಾಸಿಕ ರೂ. 34,100 ರಿಂದ 67,600 ವರೆಗೆ.
- ಸೇವಕರು (Peon): ಮಾಸಿಕ ರೂ. 27,000 ರಿಂದ 46,675 ವರೆಗೆ.
ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎಂದರೆ, ರಾಜ್ಯ ಸರ್ಕಾರವು ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ 5 ವರ್ಷಗಳ ವಿಶೇಷ ಸಡಿಲಿಕೆಯನ್ನು ನೀಡಿದೆ. ಇದರ ಅನ್ವಯ:
- ಸಾಮಾನ್ಯ ವರ್ಗದವರಿಗೆ (GM): ಗರಿಷ್ಠ 35+5 ವರ್ಷ.
- 2A, 2B, 3A, 3B ವರ್ಗದವರಿಗೆ: ಗರಿಷ್ಠ 38+5 ವರ್ಷ.
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಪ್ರವರ್ಗ-1: ಗರಿಷ್ಠ 40+5 ವರ್ಷ.
- (ಗಮನಿಸಿ: ಮಾಜಿ ಸೈನಿಕರು, ಅಂಗವಿಕಲರು ಹಾಗೂ ವಿಧವೆಯರಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರುತ್ತದೆ).
ಅರ್ಜಿ ಶುಲ್ಕದ ವಿವರ:
- ಸಾಮಾನ್ಯ ವರ್ಗ, 2A, 2B, 3A, 3B ಅಭ್ಯರ್ಥಿಗಳಿಗೆ: ರೂ. 200/- ಶುಲ್ಕ ನಿಗದಿಪಡಿಸಲಾಗಿದೆ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಸಂಪೂರ್ಣ ಶುಲ್ಕ ವಿನಾಯಿತಿ ಇದೆ (ಯಾವುದೇ ಶುಲ್ಕ ಕಟ್ಟುವಂತಿಲ್ಲ).
6. ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕೇವಲ ಆನ್‌ಲೈನ್ (Online) ಮೂಲಕವೇ ಅರ್ಜಿ ಸಲ್ಲಿಸಬೇಕು. ಖುದ್ದಾಗಿ, ಅಂಚೆ ಅಥವಾ ಬೇರೆ ಯಾವುದೇ ರೀತಿಯಲ್ಲಿ ಕಳುಹಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಶುಲ್ಕವನ್ನು ಕೂಡ ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ (UPI) ಮೂಲಕ ಆನ್‌ಲೈನ್‌ನಲ್ಲೇ ಪಾವತಿಸಬೇಕು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ: 13-03-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-04-2026 (ರಾತ್ರಿ 11:59 ರವರೆಗೆ)
- ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನಾಂಕ: 16-04-2026
Chamarajanagara Court Recruitment 2026 ಪ್ರಮುಖ ಲಿಂಕ್‌ಗಳು:
ಅರ್ಜಿ ಸಲ್ಲಿಸಲು ಹಾಗೂ ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು ಭೇಟಿ ನೀಡಬೇಕಾದ ಅಧಿಕೃತ ವೆಬ್‌ಸೈಟ್ ಲಿಂಕ್:
- ಅಧಿಸೂಚನೆಗಳು:
- ಅರ್ಜಿ ಸಲ್ಲಿಕೆ ಲಿಂಕ್: Apply ಆನ್‌ಲೈನ್
ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ಸರ್ವರ್ ಸಮಸ್ಯೆಯನ್ನು ತಪ್ಪಿಸಲು ಕೊನೆಯ ದಿನಾಂಕದವರೆಗೆ ಕಾಯದೆ, ಆದಷ್ಟು ಬೇಗ ನಿಮ್ಮ ಅರ್ಜಿಗಳನ್ನು ಸಲ್ಲಿಸಿ. ಶುಭವಾಗಲಿ!
ಇದನ್ನೂ ಓದಿ: Anganwadi Recruitment 2026 Kalaburagi Apply Online