10th, PUC ಪಾಸಾದವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉದ್ಯೋಗವಕಾಶ; ಅರ್ಜಿ ಆಹ್ವಾನ | Anganwadi Recruitment 2026 Kalaburagi Apply Online

ಊರಿನಲ್ಲೇ ಇದ್ದುಕೊಂಡು ಸರ್ಕಾರಿ ಕೆಲಸ ಮಾಡಬೇಕು ಎಂಬ ಕನಸು ಕಾಣುತ್ತಿರುವವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಭರ್ಜರಿ ಸಿಹಿಸುದ್ದಿ ನೀಡಿದೆ. ಕಲಬುರಗಿ ಜಿಲ್ಲೆಯಾದ್ಯಂತ ಖಾಲಿ ಇರುವ ಬರೋಬ್ಬರಿ 412 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷವೆಂದರೆ, ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಹಾಗೂ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವೂ ಇರುವುದಿಲ್ಲ. ಕೇವಲ ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹತ್ತನೇ ತರಗತಿ ಮತ್ತು ಪಿಯುಸಿ ಪಾಸಾದವರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಬುರಗಿ (WCD Kalaburagi).
  • ಉದ್ಯೋಗ ಸ್ಥಳ: ಕಲಬುರಗಿ ಜಿಲ್ಲೆ, ಕರ್ನಾಟಕ.
  • ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು.

ಹುದ್ದೆಗಳ ವಿವರ:

ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ:

  • ಅಫಜಲಪುರ: ಕಾರ್ಯಕರ್ತೆ – 6, ಸಹಾಯಕಿ – 35
  • ಆಳಂದ: ಕಾರ್ಯಕರ್ತೆ – 20, ಸಹಾಯಕಿ – 68
  • ಚಿಂಚೋಳಿ: ಕಾರ್ಯಕರ್ತೆ – 10, ಸಹಾಯಕಿ – 39
  • ಚಿತ್ತಾಪುರ: ಕಾರ್ಯಕರ್ತೆ – 5, ಸಹಾಯಕಿ – 29
  • ಜೇವರ್ಗಿ: ಕಾರ್ಯಕರ್ತೆ – 19, ಸಹಾಯಕಿ – 25
  • ಕಲಬುರಗಿ ಗ್ರಾಮೀಣ: ಕಾರ್ಯಕರ್ತೆ – 13, ಸಹಾಯಕಿ – 56
  • ಕಲಬುರಗಿ ನಗರ: ಕಾರ್ಯಕರ್ತೆ – 0, ಸಹಾಯಕಿ – 11
  • ಸೇಡಂ: ಕಾರ್ಯಕರ್ತೆ – 4, ಸಹಾಯಕಿ – 21
  • ಶಹಾಬಾದ್: ಕಾರ್ಯಕರ್ತೆ – 12, ಸಹಾಯಕಿ – 39

ಹುದ್ದೆಗಳ ಸಂಖ್ಯೆ:

  • ಅಂಗನವಾಡಿ ಕಾರ್ಯಕರ್ತೆಯರು – 89
  • ಅಂಗನವಾಡಿ ಸಹಾಯಕಿಯರು – 323
  • ಒಟ್ಟು ಹುದ್ದೆಗಳು: 412

ಶೈಕ್ಷಣಿಕ ಅರ್ಹತೆ:

  • ಅಂಗನವಾಡಿ ಕಾರ್ಯಕರ್ತೆಯರು: ಪಿಯುಸಿ (PUC) ತೇರ್ಗಡೆಯಾಗಿರಬೇಕು.
  • ಅಂಗನವಾಡಿ ಸಹಾಯಕಿಯರು: 10 ನೇ ತರಗತಿ (SSLC) ತೇರ್ಗಡೆಯಾಗಿರಬೇಕು.

ವೇತನ ಶ್ರೇಣಿ:

  • ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ನಿಗದಿತ ಮಾಸಿಕ ಗೌರವ ಧನವನ್ನು ನೀಡುತ್ತಾರೆ.

ವಯೋಮಿತಿ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 19 ವರ್ಷಗಳು ತುಂಬಿರಬೇಕು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮಗಳಂತೆ ವಯೋಮಿತಿ ಇರುತ್ತದೆ.

ವಯೋಮಿತಿ ಸಡಿಲಿಕೆ:

  • ವಿಕಲಚೇತನ (PH) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20-02-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-03-2026 (ಸಂಜೆ 5:30 ರೊಳಗೆ)

Anganwadi Recruitment 2026 Kalaburagi Application Link:

  • ಅಧಿಸೂಚನೆ: ಡೌನ್‌ಲೋಡ್‌
  • ಆನ್‌ಲೈನ್ ಅರ್ಜಿ: Apply ಮಾಡಿ
  • ಅಧಿಕೃತ ವೆಬ್ ಸೈಟ್: karnemakaone.kar.nic.in/abcd/

“ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದೊಂದು ಅತ್ಯುತ್ತಮ ಅವಕಾಶ. ನಿಮ್ಮ ವಾರ್ಡ್ ಅಥವಾ ಗ್ರಾಮದಲ್ಲಿ ಹುದ್ದೆ ಖಾಲಿ ಇದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಅರ್ಜಿ ಸಲ್ಲಿಸುವಾಗ ನಿಮ್ಮ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ತಪ್ಪಿಲ್ಲದೆ ನಮೂದಿಸಿ.”

Leave a Comment