ನಿನ್ನೆ (ಗುರುವಾರ) ಚಿನ್ನದ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಐತಿಹಾಸಿಕ ಕುಸಿತ ಕಂಡು ಒಡವೆ ಖರೀದಿಸುವ ಖುಷಿಯಲ್ಲಿದ್ದವರಿಗೆ ಇಂದು ಕೊಂಚ ನಿರಾಸೆಯಾಗಿದೆ. ಹೌದು, ನಿನ್ನೆಯ ಭಾರಿ ಇಳಿಕೆಯ ಬೆನ್ನಲ್ಲೇ ಶುಕ್ರವಾರ (ಮಾರ್ಚ್ 20, 2026) ಹಳದಿ ಲೋಹದ ಬೆಲೆಯಲ್ಲಿ ಮತ್ತೆ ಜಿಗಿತ ಕಂಡಿದೆ. ನಿನ್ನೆ ದಿಢೀರ್ ಕುಸಿದಿದ್ದ ಗ್ರಾಫ್ ಇಂದು ಮತ್ತೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.
ಹಾಗಾದರೆ, ನಿನ್ನೆಯ ಬೃಹತ್ ಇಳಿಕೆ ಹಾಗೂ ಇಂದಿನ ಏರಿಕೆಯ ಬಳಿಕ ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟಿದೆ? ನೀವು ಜ್ಯುವೆಲ್ಲರಿ ಮಳಿಗೆಗೆ ಹೋಗುವ ಮುನ್ನ ಈ ರೇಟ್ ಕಾರ್ಡ್ ಒಮ್ಮೆ ಚೆಕ್ ಮಾಡಿ:
ಇಂದಿನ ಚಿನ್ನದ ಬೆಲೆ: Today Gold Price 20-03-2026
22 ಕ್ಯಾರೆಟ್ (ಆಭರಣ ಚಿನ್ನ): ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸಲ್ಪಡುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ ಗ್ರಾಂಗೆ ₹60 ರಷ್ಟು ಏರಿಕೆಯಾಗಿದೆ.
- 1 ಗ್ರಾಂ ಬೆಲೆ: ₹13,835 (ನಿನ್ನೆಗಿಂತ ₹60 ಏರಿಕೆ)
- 8 ಗ್ರಾಂ ಬೆಲೆ: ₹1,10,680 (ನಿನ್ನೆಗಿಂತ ₹480 ಏರಿಕೆ)
- 10 ಗ್ರಾಂ ಬೆಲೆ: ₹1,38,350 (ಒಟ್ಟು ₹600 ಏರಿಕೆ)
24 ಕ್ಯಾರೆಟ್ (ಶುದ್ಧ ಚಿನ್ನ): ಹೂಡಿಕೆದಾರರ ಮೊದಲ ಆಯ್ಕೆಯಾದ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ ಗ್ರಾಂ ಮೇಲೆ ₹65 ರಷ್ಟು ಹೆಚ್ಚಳವಾಗಿದೆ.
- 1 ಗ್ರಾಂ ಬೆಲೆ: ₹15,093 (ನಿನ್ನೆಗಿಂತ ₹65 ಏರಿಕೆ)
- 8 ಗ್ರಾಂ ಬೆಲೆ: ₹1,20,744 (ನಿನ್ನೆಗಿಂತ ₹520 ಏರಿಕೆ)
- 10 ಗ್ರಾಂ ಬೆಲೆ: ₹1,50,930 (ಒಟ್ಟು ₹650 ಏರಿಕೆ)
18 ಕ್ಯಾರೆಟ್ (ಲೈಟ್ ವೆಟ್ ಚಿನ್ನ): ಹಗುರವಾದ ಒಡವೆಗಳ ಹಾಗೂ ವಜ್ರಾಭರಣಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ ಗ್ರಾಂಗೆ ₹49 ರಷ್ಟು ದುಬಾರಿಯಾಗಿದೆ.
- 1 ಗ್ರಾಂ ಬೆಲೆ: ₹11,320 (ನಿನ್ನೆಗಿಂತ ₹49 ಏರಿಕೆ)
- 10 ಗ್ರಾಂ ಬೆಲೆ: ₹1,13,200 (ಒಟ್ಟು ₹490 ಏರಿಕೆ)
ಕಳೆದೆರಡು ದಿನಗಳ ಮಾರುಕಟ್ಟೆ ಟ್ರೆಂಡ್ ಗಮನಿಸಿದರೆ, ಚಿನ್ನದ ಬೆಲೆ ಹೂಡಿಕೆದಾರರ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿರುವಂತಿದೆ. ನಿನ್ನೆ (ಮಾರ್ಚ್ 19) ಒಂದೇ ದಿನ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಮೇಲೆ ಬರೋಬ್ಬರಿ ₹6,550 ರಷ್ಟು ಬೃಹತ್ ಕಡಿತ ಉಂಟಾಗಿತ್ತು. ಆ ಖುಷಿಯಲ್ಲಿಯೇ ಮಳಿಗೆಯತ್ತ ಮುಖ ಮಾಡಿದ ಗ್ರಾಹಕರಿಗೆ ಇಂದು ಮತ್ತೆ ₹600 (ಪ್ರತಿ 10 ಗ್ರಾಂಗೆ) ರಷ್ಟು ಏರಿಕೆ ಬಿಸಿ ತಟ್ಟಿದೆ. ಆದರೂ, ಕಳೆದ ವಾರದ ಗರಿಷ್ಠ ದರಕ್ಕೆ (₹1,49,700) ಹೋಲಿಸಿದರೆ, ಇಂದಿನ ಬೆಲೆಯೂ (₹1,38,350) ಗ್ರಾಹಕರಿಗೆ ಲಾಭದಾಯಕವಾಗಿಯೇ ಇದೆ ಎನ್ನಬಹುದು.
- ಇದನ್ನೂ ಓದಿ: Income Caste Certificate: ಜಾತಿ, ಆದಾಯ ಪತ್ರ ಮೊಬೈಲ್ನಲ್ಲೇ ಪಡೆಯಿರಿ; ಸಚಿವ ಕೃಷ್ಣ ಬೈರೇಗೌಡ
- ಇದನ್ನೂ ಓದಿ: LPG Gas Cylinder e-KYC: ಎಲ್ಪಿಜಿ ಗ್ರಾಹಕರಿಗೆ ಬಿಗ್ ಅಪ್ಡೇಟ್: ಗ್ಯಾಸ್ e-KYC ಎಲ್ಲರಿಗೂ ಕಡ್ಡಾಯವೇ?