ಮದುವೆ ಸೀಸನ್ ಹಾಗೂ ಶುಭಕಾರ್ಯಗಳ ಹೊಸ್ತಿಲಲ್ಲಿ ಆಭರಣ ಪ್ರಿಯರಿಗೆ ಮಾರುಕಟ್ಟೆಯಿಂದ ಬಂಪರ್ ಸುದ್ದಿ ಸಿಕ್ಕಿದೆ. ಸೋಮವಾರ (ಮಾರ್ಚ್ 16, 2026) ಬೆಳಗಿನ ಅವಧಿಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಸಂಜೆಯ ಹೊತ್ತಿಗೆ ದಿಢೀರ್ ಹಾಗೂ ಭಾರೀ ಪ್ರಮಾಣದ ಕುಸಿತ ಕಂಡಿದೆ.
ಸತತ ಐದು ದಿನಗಳಿಂದ ಇಳಿಕೆಯ ಹಾದಿಯಲ್ಲಿರುವ ಬಂಗಾರದ ದರ ಇಂದು ಪಾತಾಳಕ್ಕಿಳಿದಿದ್ದು, ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಮಾರುಕಟ್ಟೆಯಲ್ಲಿ ಇಂದಿನ ಸಂಜೆಯ ಅಧಿಕೃತ ದತ್ತಾಂಶಗಳನ್ನು ಗಮನಿಸಿದಾಗ, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಉಂಟಾಗಿದೆ.
ಓದಿ: ಆಭರಣ ಪ್ರಿಯರಿಗೆ ಗುಡ್ನ್ಯೂಸ್: ಯುಗಾದಿ ಹಬ್ಬಕ್ಕೆ ಚಿನ್ನದ ಬೆಲೆ ಇಳಿಕೆ; ಇಂದಿನ ಬೆಲೆ ಎಷ್ಟಿದೆ ನೋಡಿ
ನೀವು ಆಭರಣ ಖರೀದಿಸುವ ಪ್ಲಾನ್ನಲ್ಲಿದ್ದರೆ, ಸಂಜೆಯ ನಂತರದ ಈ ಹೊಸ ಮತ್ತು ಪರಿಷ್ಕೃತ ರೇಟ್ ಕಾರ್ಡ್ ಇಲ್ಲಿದೆ:
ಇಂದಿನ ಚಿನ್ನದ ದರ: Today Gold Price 16-03-2026
22 ಕ್ಯಾರೆಟ್ (ಆಭರಣ ಚಿನ್ನ):
ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ ಗ್ರಾಂಗೆ ದಿಢೀರ್ ₹205 ಇಳಿಕೆಯಾಗಿದೆ.
- 1 ಗ್ರಾಂ ಬೆಲೆ: ₹14,430 (ನಿನ್ನೆಗಿಂತ ₹205 ಇಳಿಕೆ)
- 8 ಗ್ರಾಂ ಬೆಲೆ: ₹1,15,440 (ನಿನ್ನೆಗಿಂತ ₹1,640 ಇಳಿಕೆ)
- 10 ಗ್ರಾಂ ಬೆಲೆ: ₹1,44,300 (ಒಟ್ಟು ₹2,050 ಇಳಿಕೆ)
24 ಕ್ಯಾರೆಟ್ (ಶುದ್ಧ ಚಿನ್ನ):
ಹೂಡಿಕೆದಾರರ ಮೊದಲ ಆಯ್ಕೆಯಾದ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ ಗ್ರಾಂ ಮೇಲೆ ₹224 ಇಳಿಕೆ ದಾಖಲಾಗಿದೆ.
- 1 ಗ್ರಾಂ ಬೆಲೆ: ₹15,742 (ನಿನ್ನೆಗಿಂತ ₹224 ಇಳಿಕೆ)
- 8 ಗ್ರಾಂ ಬೆಲೆ: ₹1,25,936 (ನಿನ್ನೆಗಿಂತ ₹1,792 ಇಳಿಕೆ)
- 10 ಗ್ರಾಂ ಬೆಲೆ: ₹1,57,420 (ಒಟ್ಟು ₹2,240 ಇಳಿಕೆ)
18 ಕ್ಯಾರೆಟ್ (ಲೈಟ್ ವೆಟ್ ಚಿನ್ನ):
ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕುಸಿತ ಕಂಡಿದ್ದು, ಪ್ರತಿ ಗ್ರಾಂಗೆ ₹167 ಕಮ್ಮಿಯಾಗಿದೆ.
- 1 ಗ್ರಾಂ ಬೆಲೆ: ₹11,807 (ನಿನ್ನೆಗಿಂತ ₹167 ಇಳಿಕೆ)
- 10 ಗ್ರಾಂ ಬೆಲೆ: ₹1,18,070 (ಒಟ್ಟು ₹1,670 ಇಳಿಕೆ)
ಮಾರುಕಟ್ಟೆ ವಿಶ್ಲೇಷಣೆ: ಕಳೆದ ಒಂದು ವಾರದ ಮಾರುಕಟ್ಟೆ ವರದಿ ನೋಡಿದರೆ, ಮಾರ್ಚ್ 11 ರಂದು 22 ಕ್ಯಾರೆಟ್ ಚಿನ್ನದ ಬೆಲೆ ₹14,970 ತಲುಪಿತ್ತು. ಆದರೆ ಮಾರ್ಚ್ 12 ರಿಂದ ಆರಂಭವಾದ ಬೆಲೆ ಇಳಿಕೆಯ ಟ್ರೆಂಡ್ ಸತತವಾಗಿ ಮುಂದುವರಿದಿದ್ದು, ಇಂದು ಸಂಜೆಯ ವೇಳೆಗೆ ₹14,430 ಕ್ಕೆ ಬಂದು ನಿಂತಿದೆ. ಕೇವಲ 5 ದಿನಗಳ ಅಂತರದಲ್ಲಿ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಮೇಲೆ ಬರೋಬ್ಬರಿ ₹5,400 ಕಡಿತ ಉಂಟಾಗಿದೆ. ಬೆಳಗಿನ ದರಕ್ಕಿಂತ ಸಂಜೆಯ ದರದಲ್ಲಿ ಭಾರಿ ಕುಸಿತವಾಗಿರುವುದು ಗ್ರಾಹಕರಿಗೆ ಸುವರ್ಣಾವಕಾಶ ಒದಗಿಸಿದೆ.