ಎಸ್ಎಸ್ಎಲ್ಸಿ (SSLC) ವಾರ್ಷಿಕ ಪರೀಕ್ಷೆಗೆ ಸಜ್ಜಾಗುತ್ತಿರುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC Free Bus) ಮಹತ್ವದ ಸಿಹಿಸುದ್ದಿಯೊಂದನ್ನು ನೀಡಿದೆ.
ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಪರೀಕ್ಷಾ ದಿನಗಳಂದು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಉಚಿತವಾಗಿ ಪ್ರಯಾಣಿಸಲು ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿಗಮವು, ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳು ಯಾವುದೇ ಸಾರಿಗೆ ತೊಂದರೆಯಿಲ್ಲದೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.
ಸಂಕ್ಷೀಪ್ತ ಮಾಹಿತಿ (Highlights):
- ಯೋಜನೆ: SSLC ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ.
- ಉಚಿತ ಪ್ರಯಾಣದ ಅವಧಿ: 18-03-2026 ರಿಂದ 02-04-2026 ರವರೆಗೆ.
- ಅನುಮತಿ ಇರುವ ಬಸ್ಸುಗಳು: ಕೆಎಸ್ಆರ್ಟಿಸಿಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳು.
- ಕಡ್ಡಾಯ ದಾಖಲೆ: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಪ್ರವೇಶ ಪತ್ರ (Hall Ticket).
ಉಚಿತ ಪ್ರಯಾಣದ ನಿಯಮಗಳೇನು?: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ-1 ದಿನಾಂಕ 18-03-2026 ರಿಂದ ಆರಂಭವಾಗಿ 02-04-2026 ರವರೆಗೆ ನಡೆಯಲಿವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಈ ಕೆಳಗಿನ ನಿಯಮಗಳನ್ವಯ ಉಚಿತ ಪ್ರಯಾಣ ಮಾಡಬಹುದು:
- ಎಲ್ಲಿಂದ ಎಲ್ಲಿಗೆ? ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ತಮಗೆ ನಿಯೋಜನೆಗೊಂಡಿರುವ ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಮತ್ತು ಪರೀಕ್ಷೆ ಮುಗಿಸಿ ಮರಳಿ ಮನೆಗೆ ಹಿಂದಿರುಗುವಾಗ ಮಾತ್ರ ಈ ಉಚಿತ ಸೇವೆಯನ್ನು ಬಳಸಿಕೊಳ್ಳಬಹುದು.
- ಪ್ರವೇಶ ಪತ್ರ ಕಡ್ಡಾಯ: ಬಸ್ಸಿನಲ್ಲಿ ಪ್ರಯಾಣಿಸುವಾಗ ನಿರ್ವಾಹಕರಿಗೆ (Conductor) ಕಡ್ಡಾಯವಾಗಿ ಅಸಲಿ “ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಪ್ರವೇಶ ಪತ್ರವನ್ನು (Hall Ticket)” ತೋರಿಸಬೇಕು.
- ಯಾವ ಬಸ್ಸುಗಳಲ್ಲಿ ಅವಕಾಶ? ನಿಗಮದ ನಗರ ಸಾರಿಗೆ, ಹೊರವಲಯ ಸಾರಿಗೆ, ಸಾಮಾನ್ಯ (Ordinary) ಹಾಗೂ ವೇಗದೂತ (Express) ಬಸ್ಸುಗಳಲ್ಲಿ ಮಾತ್ರ ಈ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ (ಐಷಾರಾಮಿ ಬಸ್ಸುಗಳಿಗೆ ಇದು ಅನ್ವಯಿಸುವುದಿಲ್ಲ).
ಪ್ರಮುಖ ಸೂಚನೆ: ಪರೀಕ್ಷೆಯ ಟೆನ್ಷನ್ನಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಟ್ರಾಫಿಕ್ ನಡುವೆ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡುವ ಧಾವಂತದಲ್ಲಿರುವ ಪೋಷಕರಿಗೆ ಸಾರಿಗೆ ಇಲಾಖೆಯ ಈ ನಿರ್ಧಾರ ನಿಜಕ್ಕೂ ದೊಡ್ಡ ರಿಲೀಫ್ ನೀಡಿದೆ. ಪರೀಕ್ಷಾ ದಿನದಂದು ಬಸ್ ಪಾಸ್, ಟಿಕೆಟ್ ಹಣ ಅಥವಾ ಚಿಲ್ಲರೆ ಸಮಸ್ಯೆ ಇಲ್ಲದೆ ವಿದ್ಯಾರ್ಥಿಗಳು ನೆಮ್ಮದಿಯಾಗಿ ಪರೀಕ್ಷಾ ಕೇಂದ್ರ ತಲುಪಬಹುದು. ರಾಜ್ಯದ ಎಲ್ಲಾ SSLC ವಿದ್ಯಾರ್ಥಿಗಳು ಈ ಉಚಿತ ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.
ಇದನ್ನೂ ಓದಿ: PM Kisan 22nd Instalment: ರೈತರ ಖಾತೆಗೆ ಪಿಎಂ ಕಿಸಾನ್ 22ನೇ ಕಂತಿನ ₹2,000 ಹಣ ಜಮಾ