ಕರ್ನಾಟಕ ಹೈಕೋರ್ಟ್ ನೇಮಕಾತಿ 2026 | Karnataka High Court Notification 2026 Apply Online

Telegram Group Join Now
WhatsApp Group Join Now

ನ್ಯಾಯಾಂಗ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು (High Court of Karnataka) ಬಂಪರ್ ಅವಕಾಶವೊಂದನ್ನು ನೀಡಿದೆ.

ಖಾಲಿ ಇರುವ ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 70 ಹುದ್ದೆಗಳನ್ನು ‘ನೇರ ನೇಮಕಾತಿ’ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಪದವಿ (Degree) ಹಾಗೂ ಶೀಘ್ರಲಿಪಿ/ಬೆರಳಚ್ಚು (Shorthand/Typing) ತೇರ್ಗಡೆಯಾದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಆಸಕ್ತರು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕಿದೆ. ಹಾಗಾದರೆ, ಯಾವೆಲ್ಲಾ ಹುದ್ದೆಗಳು ಖಾಲಿ ಇವೆ? ವಯೋಮಿತಿ ಎಷ್ಟಿರಬೇಕು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಮುಂತಾದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ:

Karnataka High Court Notification 2026 ಸಂಕ್ಷೀಪ್ತ ಮಾಹಿತಿ:

  • ನೇಮಕಾತಿ ಸಂಸ್ಥೆ: ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು
  • ಒಟ್ಟು ಹುದ್ದೆಗಳ ಸಂಖ್ಯೆ: 70 ಹುದ್ದೆಗಳು
  • ವೇತನ ಶ್ರೇಣಿ: ₹44,900 ದಿಂದ ₹1,42,400 ರವರೆಗೆ
  • ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ:

  • ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ (RPC): 59 ಹುದ್ದೆಗಳು
  • ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ (KKR): 11 ಹುದ್ದೆಗಳು

Karnataka High Court Recruitment 2026 ವಿದ್ಯಾರ್ಹತೆ:

  • ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ / ಕಲೆ / ವಾಣಿಜ್ಯ / ಬಿಸಿನೆಸ್ ಮ್ಯಾನೇಜ್‌ಮೆಂಟ್ / ಕಂಪ್ಯೂಟರ್ ಅಪ್ಲಿಕೇಷನ್ಸ್ ಅಥವಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿ (Degree) ಪಡೆದಿರಬೇಕು. ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಕಮರ್ಷಿಯಲ್ ಪ್ರಾಕ್ಟಿಸ್ / ಸೆಕ್ರೆಟೇರಿಯಲ್ ಪ್ರಾಕ್ಟಿಸ್‌ನಲ್ಲಿ ಡಿಪ್ಲೊಮಾ ಪಾಸ್ ಮಾಡಿರಬೇಕು.
  • ಇದರ ಜೊತೆಗೆ ಆಂಗ್ಲ ಶೀಘ್ರಲಿಪಿ (English Shorthand) ಮತ್ತು ಆಂಗ್ಲ ಬೆರಳಚ್ಚು (English Typing) ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
  • ಕನಿಷ್ಠ 3 ತಿಂಗಳ ಕಂಪ್ಯೂಟರ್ ತರಬೇತಿ (Computer Basics) ಪಡೆದ ಪ್ರಮಾಣಪತ್ರ ಹೊಂದಿರಬೇಕು.

ವೇತನ ಶ್ರೇಣಿ:

  • ಮಾಸಿಕ ₹44,900 ರಿಂದ ₹1,42,400 ರವರೆಗೆ (ಹಾಗೂ ಇತರ ಭತ್ಯೆಗಳು) ಸಿಗಲಿದೆ.

ವಯೋಮಿತಿ (Age Limit):
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.

  • ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷ.
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ಗರಿಷ್ಠ 43 ವರ್ಷ.
  • ಪ.ಜಾ / ಪ.ಪಂ / ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷ.

ವಯೋಮಿತಿ ಸಡಿಲಿಕೆ (Age Relaxation): ಸರ್ಕಾರದ ಆದೇಶದನ್ವಯ (DPAR 262 SRR 2025) ಈ ನೇಮಕಾತಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one time measure) 5 ವರ್ಷಗಳ ವಿಶೇಷ ಸಡಿಲಿಕೆ ನೀಡಲಾಗಿದೆ. (ಈ 5 ವರ್ಷಗಳ ಸಡಿಲಿಕೆಯನ್ನು ಮೇಲಿನ ಗರಿಷ್ಠ ವಯೋಮಿತಿಯಲ್ಲಿ ಈಗಾಗಲೇ ಸೇರಿಸಿ ನಿಗದಿಪಡಿಸಲಾಗಿದೆ).

ಅರ್ಜಿ ಶುಲ್ಕದ ವಿವರ:

  • ಸಾಮಾನ್ಯ ವರ್ಗ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ₹500/-
  • ಪ.ಜಾ, ಪ.ಪಂ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ₹250/-

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಬಿಡುಗಡೆಯಾದ ದಿನಾಂಕ: 16-03-2026
  • ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 15-04-2026

Karnataka High Court Recruitment 2026 ಪ್ರಮುಖ ಲಿಂಕ್‌ಗಳು:

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಕೃತ ಜಾಲತಾಣಕ್ಕೆ (https://judiciary.karnataka.gov.in) ಭೇಟಿ ನೀಡಿ ಕೇವಲ ಆನ್‌ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ನಿಗದಿತ ಶುಲ್ಕವನ್ನು ಎಸ್‌ಬಿಐ (SBI) ಆನ್‌ಲೈನ್ ಪಾವತಿ ಗೇಟ್‌ ಮೂಲಕ ಪಾವತಿಸಬಹುದು.

SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ

Telegram Group Join Now
WhatsApp Group Join Now

Leave a Comment