SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ | Yadgir Court Recruitment 2026 Apply Online

Telegram Group Join Now
WhatsApp Group Join Now

ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವು ಬಂಪರ್ ಅವಕಾಶವೊಂದನ್ನು ನೀಡಿದೆ. ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 14 ಹುದ್ದೆಗಳನ್ನು ‘ನೇರ ನೇಮಕಾತಿ’ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಕೇವಲ 10 ನೇ ತರಗತಿ (SSLC) ತೇರ್ಗಡೆಯಾದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಆಸಕ್ತರು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕಿದೆ. ಹಾಗಾದರೆ, ಯಾವೆಲ್ಲಾ ಹುದ್ದೆಗಳು ಖಾಲಿ ಇವೆ? ವಯೋಮಿತಿ ಎಷ್ಟಿರಬೇಕು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಮುಂತಾದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ:

ಸಂಕ್ಷೀಪ್ತ ಮಾಹಿತಿ:

  • ನೇಮಕಾತಿ ಸಂಸ್ಥೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಯಾದಗಿರಿ
  • ಒಟ್ಟು ಹುದ್ದೆಗಳ ಸಂಖ್ಯೆ: 14 ಹುದ್ದೆಗಳು
  • ವೇತನ ಶ್ರೇಣಿ: ₹27,000 ದಿಂದ ₹61,300 ರವರೆಗೆ
  • ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ:
ಆದೇಶ ಜಾರಿಕಾರ (Process Server): 09 ಹುದ್ದೆಗಳು
ಜವಾನ (Peon): 05 ಹುದ್ದೆಗಳು

Yadgir Court Recruitment 2026 ಶೈಕ್ಷಣಿಕ ವಿದ್ಯಾರ್ಹತೆ:

  • ಆದೇಶ ಜಾರಿಕಾರ: ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು. ಲಘು ವಾಹನ ಚಾಲನಾ ಪರವಾನಿಗೆ (Driving License) ಹೊಂದಿದ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು.
  • ಜವಾನ: ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಕಡ್ಡಾಯವಾಗಿ ತಿಳಿದಿರಬೇಕು.

ವೇತನ ಶ್ರೇಣಿ:
ಆದೇಶ ಜಾರಿಕಾರ: ₹31,775 ರಿಂದ ₹61,300 ರವರೆಗೆ ನಿಗದಿಪಡಿಸಲಾಗಿದೆ.
ಜವಾನ: ₹27,000 ರಿಂದ ₹46,675 ರವರೆಗೆ (ಹಾಗೂ ಇತರ ಭತ್ಯೆಗಳು) ಸಿಗಲಿದೆ.

ವಯೋಮಿತಿ (Age Limit): ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.

  • ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷ.
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷ.
  • ಪ.ಜಾ / ಪ.ಪಂ / ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷ.

ವಯೋಮಿತಿ ಸಡಿಲಿಕೆ (Age Relaxation): ಸರ್ಕಾರದ ಆದೇಶದನ್ವಯ ಈ ನೇಮಕಾತಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one time measure) 5 ವರ್ಷಗಳ ವಿಶೇಷ ಸಡಿಲಿಕೆ ನೀಡಲಾಗಿದೆ:

  • ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: 5 ವರ್ಷ.
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 5 ವರ್ಷ.
  • ಪ.ಜಾ / ಪ.ಪಂ / ಪ್ರವರ್ಗ-1 ರ ಅಭ್ಯರ್ಥಿಗಳಿಗೆ: 5 ವರ್ಷ.
  • ಮಾಜಿ ಸೈನಿಕರಿಗೆ: ಅವರು ಸಶಸ್ತ್ರ ದಳಗಳಲ್ಲಿ ಸೇವೆ ಸಲ್ಲಿಸಿದ ವರ್ಷಗಳಿಗೆ 3 ವರ್ಷಗಳನ್ನು ಸೇರಿಸಿ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
  • ಇತರರಿಗೆ: ಅಂಗವಿಕಲರು, ವಿಧವೆಯರು ಮತ್ತು ಜೀತ ಕಾರ್ಮಿಕ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕದ ವಿವರ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ₹200/-
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ₹100/-
  • ಪ.ಜಾ, ಪ.ಪಂ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ₹100/-

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13-03-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-04-2026 (ರಾತ್ರಿ 11:59 ರವರೆಗೆ)
  • ಶುಲ್ಕ ಪಾವತಿಸಲು ಕಡೆಯ ದಿನಾಂಕ: 13-04-2026

Yadgir Court Recruitment 2026 ಪ್ರಮುಖ ಲಿಂಕ್‌ಗಳು:

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಕೇವಲ ಆನ್‌ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ನಿಗದಿತ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ UPI ಮೂಲಕ ಪಾವತಿಸತಕ್ಕದ್ದು.

Telegram Group Join Now
WhatsApp Group Join Now

Leave a Comment