ಬಂಗಾರ ಖರೀದಿಗೆ ಕಾದು ಕುಳಿತವರಿಗೆ ಶುಕ್ರವಾರ ಬಂಪರ್ ಅವಕಾಶವೊಂದು ಒದಗಿಬಂದಿದೆ. ಹೌದು, ಸದಾ ಏರಿಳಿತಗಳ (Volatility) ನಡುವೆ ಗ್ರಾಹಕರಲ್ಲಿ ಆತಂಕ ಮೂಡಿಸುತ್ತಿದ್ದ ಚಿನ್ನದ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಬೆಲೆ ಕುಸಿತ ಕಂಡಿದೆ.
ನಿನ್ನೆ (ಮಾರ್ಚ್ 12) ಗಣನೀಯವಾಗಿ ಇಳಿಕೆಯಾಗಿದ್ದ ಹಳದಿ ಲೋಹದ ದರ, ವಾರಾಂತ್ಯದ ಹೊಸ್ತಿಲಲ್ಲಿ (ಮಾರ್ಚ್ 13) ಮತ್ತಷ್ಟು ಅಗ್ಗವಾಗುವ ಮೂಲಕ ಆಭರಣ ಪ್ರಿಯರ ಜೇಬಿಗೆ ಕೊಂಚ ರಿಲೀಫ್ ನೀಡಿದೆ.
ನೀವು ಇಂದು ಜ್ಯುವೆಲ್ಲರಿ ಅಂಗಡಿಗೆ ಭೇಟಿ ನೀಡುವ ಮುನ್ನ, ನಿನ್ನೆಗಿಂತ ಇಂದು ಬೆಲೆ ಎಷ್ಟು ಕಮ್ಮಿಯಾಗಿದೆ? 22, 24 ಹಾಗೂ 18 ಕ್ಯಾರೆಟ್ನ ದರಗಳೆಷ್ಟು? ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Today Gold Price March 13, 2026 in Karnataka:
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ (22K Gold Price): ಸಾಮಾನ್ಯವಾಗಿ ಒಡವೆಗಳನ್ನು ತಯಾರಿಸಲು ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ ಗ್ರಾಂಗೆ ₹140 ರಷ್ಟು ಗಣನೀಯ ಇಳಿಕೆಯಾಗಿದೆ.
- 1 ಗ್ರಾಂ ಚಿನ್ನದ ಬೆಲೆ: ₹14,730 (ನಿನ್ನೆಗಿಂತ ₹140 ಇಳಿಕೆ)
- 8 ಗ್ರಾಂ : ₹1,17,840 (ನಿನ್ನೆಗಿಂತ ₹1,120 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ: ₹1,47,300 (ಒಟ್ಟು ₹1,400 ಇಳಿಕೆ)
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ (24K Gold Price): ನಾಣ್ಯ ಅಥವಾ ಗಟ್ಟಿ ರೂಪದಲ್ಲಿ ಹೂಡಿಕೆ ಮಾಡುವವರ ನೆಚ್ಚಿನ 24 ಕ್ಯಾರೆಟ್ (99.9% ಶುದ್ಧ) ಚಿನ್ನದ ಬೆಲೆಯಲ್ಲಿ ಇಂದು ಪ್ರತಿ ಗ್ರಾಂಗೆ ಬರೋಬ್ಬರಿ ₹153 ಇಳಿಕೆ ಕಂಡಿದೆ.
- 1 ಗ್ರಾಂ ಚಿನ್ನದ ಬೆಲೆ: ₹16,069 (ನಿನ್ನೆಗಿಂತ ₹153 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ: ₹1,28,552 (ನಿನ್ನೆಗಿಂತ ₹1,224 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ: ₹1,60,690 (ಒಟ್ಟು ₹1,530 ಇಳಿಕೆ)
18 ಕ್ಯಾರೆಟ್ ಚಿನ್ನದ ಬೆಲೆ (18K Gold Price): ಲೈಟ್ ವೆಯಿಟ್, ಆಂಟಿಕ್ ಹಾಗೂ ಡೈಮಂಡ್ ಆಭರಣಗಳಿಗೆ ಬಳಸುವ 18 ಕ್ಯಾರೆಟ್ ಚಿನ್ನದ ದರವೂ ಇಂದು ಕುಸಿತ ಕಂಡಿದ್ದು, ಪ್ರತಿ ಗ್ರಾಂಗೆ ₹115 ಕಮ್ಮಿಯಾಗಿದೆ.
- 1 ಗ್ರಾಂಗೆ: ₹12,052 (ನಿನ್ನೆಗಿಂತ ₹115 ಇಳಿಕೆ)
- 10 ಗ್ರಾಂಗೆ: ₹1,20,520 (ಒಟ್ಟು ₹1,150 ಇಳಿಕೆ)
ಮಾರ್ಚ್ 11 ರಂದು ಏಕಾಏಕಿ ಏರಿಕೆ ಕಂಡು ಶಾಕ್ ಕೊಟ್ಟಿದ್ದ ಚಿನ್ನದ ಬೆಲೆ, ಇದೀಗ ಸತತ ಎರಡು ದಿನಗಳಿಂದ ಇಳಿಕೆಯ ಹಾದಿಯಲ್ಲಿದೆ. ಮಾರ್ಚ್ ಮೊದಲ ವಾರದಲ್ಲಿ 15,000 ರೂ. ಗಡಿ ದಾಟಿದ್ದ 22 ಕ್ಯಾರೆಟ್ ಬೆಲೆ, ಇದೀಗ 14,700 ರೂ. ಆಸುಪಾಸಿಗೆ ಇಳಿದಿರುವುದು ಗ್ರಾಹಕರಿಗೆ ಸಮಾಧಾನಕರ ಸಂಗತಿ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆಗಳಿರುವುದರಿಂದ, ಬಜೆಟ್ ಲೆಕ್ಕಾಚಾರದಲ್ಲಿರುವ ಗ್ರಾಹಕರು ಈಗಿನ ಇಳಿಕೆಯ ಲಾಭ ಪಡೆದುಕೊಳ್ಳಬಹುದು.