PM Kisan 22nd Instalment Status: ಪಿಎಂ ಕಿಸಾನ್ 22ನೇ ಕಂತಿನ ಹಣ ಬಿಡುಗಡೆ: ಇಂದು ಸಂಜೆ 5 ಗಂಟೆಗೆ 9.32 ಕೋಟಿ ರೈತರ ಖಾತೆಗೆ ತಲಾ ₹2,000 ಜಮಾ

Telegram Group Join Now
WhatsApp Group Join Now

ದೇಶದ ಕೋಟ್ಯಂತರ ರೈತರು ಅತ್ಯಂತ ಕಾತುರದಿಂದ ಕಾಯುತ್ತಿದ್ದ ಗಳಿಗೆ ಕೊನೆಗೂ ಬಂದೇ ಬಿಟ್ಟಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-Kisan) ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಡುಗಡೆ ಮಾಡಲಿದ್ದಾರೆ.

ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಇಂದು ಸಂಜೆ ನಿಮ್ಮ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಿಹಿಸುದ್ದಿಯ ಮೆಸೇಜ್ ಬರುವುದು ಖಚಿತ. ಇಂದಿನ ಡಿಜಿಟಲ್ ಹಣ ವರ್ಗಾವಣೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ, ಫಲಾನುಭವಿಗಳ ಸಂಖ್ಯೆಯಲ್ಲಿನ ಕಡಿತ ಮತ್ತು ನಿಮ್ಮ ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವ ವಿಧಾನ ಇಲ್ಲಿದೆ.

ಇಂದು ಸಂಜೆ 5 ಗಂಟೆಗೆ ಬಿಡುಗಡೆ: ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಸಂಜೆ 5 ಗಂಟೆಗೆ ಡಿಜಿಟಲ್ ಬಟನ್ ಒತ್ತುವ ಮೂಲಕ 22ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.

ಈ ಬಾರಿಯ ಕಂತಿನಲ್ಲಿ ದೇಶದಾದ್ಯಂತ ಒಟ್ಟು 9 ಕೋಟಿ 32 ಲಕ್ಷಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ತಲಾ ₹2,000 ದಂತೆ, ಒಟ್ಟಾರೆ ₹18,640 ಕೋಟಿಗೂ ಅಧಿಕ ಬೃಹತ್ ಮೊತ್ತವನ್ನು ಜಮಾ ಮಾಡಲಾಗುತ್ತಿದೆ.

ಈ ಬಾರಿ 3.8 ಲಕ್ಷ ರೈತರಿಗೆ ಬರಲ್ಲಾ PM ಕಿಸಾನ್ ಹಣ:

ನಿಮಗೆ ಅಚ್ಚರಿಯಾಗಬಹುದು, ಕಳೆದ ಬಾರಿ ನವೆಂಬರ್ 19, 2025 ರಂದು 21ನೇ ಕಂತಿನ 9,35,79,869 ರೈತರು ಪಿಎಂ ಕಿಸಾನ್ ಹಣ ಪಡೆದಿದ್ದರು. ಆದರೆ, ಈ ಬಾರಿ ಆ ಸಂಖ್ಯೆ 9.32 ಕೋಟಿಗೆ ಇಳಿಕೆಯಾಗಿದೆ. ಅಂದರೆ, ಬರೋಬ್ಬರಿ 3.8 ಲಕ್ಷದಷ್ಟು ರೈತರು ಈ ಬಾರಿ ಕಂತಿನ ಹಣದಿಂದ ವಂಚಿತರಾಗಲಿದ್ದಾರೆ. 11ನೇ ಕಂತಿಗೆ (ಏಪ್ರಿಲ್-ಜುಲೈ 2022) ಹೋಲಿಸಿದರೆ, ಒಟ್ಟಾರೆಯಾಗಿ ಬರೋಬ್ಬರಿ 1.17 ಕೋಟಿ ರೈತರ ಹೆಸರುಗಳು ಫಲಾನುಭವಿಗಳ ಪಟ್ಟಿಯಿಂದ ಡಿಲೀಟ್ ಆಗಿವೆ.

ಫಲಾನುಭವಿಗಳ ಸಂಖ್ಯೆ ದಿಢೀರ್ ಇಳಿಕೆಯಾಗಲು ಕಾರಣವೇನು? ಸರ್ಕಾರವು ನಕಲಿ ರೈತರು ಮತ್ತು ಅನರ್ಹರಿಗೆ ಕಡಿವಾಣ ಹಾಕಲು ಅತ್ಯಂತ ಕಠಿಣವಾದ ಡಿಜಿಟಲ್ ಪರಿಶೀಲನೆ (Verification) ನಡೆಸುತ್ತಿದೆ. ಈ ಕೆಳಗಿನ ಕಾರಣಗಳಿಗಾಗಿ ಲಕ್ಷಾಂತರ ರೈತರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ:

  1. ಇ-ಕೆವೈಸಿ (e-KYC) ಮಾಡಿಸದಿರುವುದು: ಕಡ್ಡಾಯವಾಗಿರುವ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ರೈತರ ಖಾತೆಗೆ ಹಣವನ್ನು ತಡೆಹಿಡಿಯಲಾಗಿದೆ.
  2. ನಕಲಿ ದಾಖಲೆಗಳು ಮತ್ತು ಮರಣ ಹೊಂದಿದವರು: ನಕಲಿ ದಾಖಲೆ ನೀಡಿ ಹಣ ಪಡೆಯುತ್ತಿದ್ದವರು ಹಾಗೂ ಮರಣ ಹೊಂದಿದ ಫಲಾನುಭವಿಗಳ ಹೆಸರನ್ನು ಡೇಟಾಬೇಸ್‌ನಿಂದ ತೆಗೆದುಹಾಕಲಾಗಿದೆ.
  3. ಹೊರಗಿಡುವ ಮಾನದಂಡ: ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು ಸೇರಿದಂತೆ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿದ ಶಂಕಿತ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.

How Check PM Kisan 22nd Instalment Status?

ನಿಮಗೆ ಇವತ್ತು ಹಣ ಬರುತ್ತಾ? ಸ್ಟೇಟಸ್ ಚೆಕ್ ಮಾಡುವುದು ಹೇಗೆ?: ಇಂದು ಸಂಜೆ 5 ಗಂಟೆಗೆ ಹಣ ಬಿಡುಗಡೆಯಾಗಲಿದ್ದು, ನಿಮ್ಮ ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ಎಂಬುದನ್ನು ನಿಮ್ಮ ಮೊಬೈಲ್‌ನಲ್ಲಿ ಹೀಗೆ ಚೆಕ್ ಮಾಡಿಕೊಳ್ಳಿ:

  1. ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ (pmkisan.gov.in) ಓಪನ್ ಮಾಡಿ.
  2. ಮುಖಪುಟದಲ್ಲಿರುವ ‘Know Your Status’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ರಿಜಿಸ್ಟ್ರೇಷನ್ ನಂಬರ್ (ಅಥವಾ ಆಧಾರ್/ಮೊಬೈಲ್ ಸಂಖ್ಯೆ) ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ ‘Get OTP’ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್‌ ನಂಬರ್‌ಗೆ ಬಂದ OTP ಅನ್ನು ಎಂಟರ್‌ ಮಾಡಿ Get Data ಮೇಲೆ ಕ್ಲಿಕ್ ಮಾಡಿ.
  4. ಅಲ್ಲಿ ನಿಮ್ಮ e-KYC, Land Seeding (ಭೂಮಿ ಪರಿಶೀಲನೆ) ಮತ್ತು Aadhaar Bank Seeding ಸ್ಟೇಟಸ್ “YES” ಎಂದಿದ್ದರೆ, ಇಂದು ನಿಮ್ಮ ಖಾತೆಗೆ ಹಣ ಜಮಾ ಆಗಬಹುದು.

PM Kisan 22nd Instalment Status Village Wise List:

ಲಕ್ಷಾಂತರ ಹೆಸರುಗಳನ್ನು ಡಿಲೀಟ್ ಮಾಡಿರುವ ಕಾರಣ, ರೈತರು ಆನ್‌ಲೈನ್‌ನಲ್ಲಿ ಫಲಾನುಭವಿಗಳ ಪಟ್ಟಿಯನ್ನು (Beneficiary List) ಒಮ್ಮೆ ಚೆಕ್ ಮಾಡಿಕೊಳ್ಳುವುದು ಉತ್ತಮ:

  1. ಮೊದಲು ಪಿಎಂ-ಕಿಸಾನ್ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
  2. ಮುಖಪುಟದಲ್ಲಿರುವ ‘ಫಲಾನುಭವಿಗಳ ಪಟ್ಟಿ’ (Beneficiary List) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  3. ನಂತರ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಮತ್ತು ಗ್ರಾಮವನ್ನು ಆಯ್ಕೆಮಾಡಿ.
  4. Get Report ಮೇಲೆ ಕ್ಲಿಕ್ ಮಾಡಿ.
  5. ಈಗ ನೀವು ಆಯ್ಕೆ ಮಾಡಿದ ಗ್ರಾಮದ ಫಲಾನುಭವಿಗಳ ಪಟ್ಟಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಖಂಡಿತವಾಗಿಯೂ ನಿಮಗೆ ಕಂತಿನ ಹಣ ಬರುತ್ತದೆ.

ಇ-ಕೆವೈಸಿ ಬಾಕಿ ಇದ್ಯಾ? ಈಗಲೇ ಮಾಡಿಕೊಳ್ಳಿ: ಇನ್ನೂ ಇ-ಕೆವೈಸಿ (e-KYC) ಮಾಡಿಸದ ರೈತರು ಆತಂಕಪಡುವ ಅಗತ್ಯವಿಲ್ಲ. ನೀವು ಈಗಲೂ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಆಧಾರ್ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ OTP ಮೂಲಕ ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು. ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC Center) ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕವೂ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

Telegram Group Join Now
WhatsApp Group Join Now

Leave a Comment