ಚಿನ್ನದ ಮಾರುಕಟ್ಟೆಯಲ್ಲಿ ಅಕ್ಷರಶಃ ಬೆಲೆ ಕುಸಿತದ ಸುನಾಮಿಯೇ ಸೃಷ್ಟಿಯಾಗಿದೆ. ಸೋಮವಾರ (ಮಾರ್ಚ್ 23, 2026) ಬೆಳಿಗ್ಗೆಯಷ್ಟೇ ಭಾರಿ ಇಳಿಕೆ ಕಂಡು ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನದ ದರ, ಸಂಜೆಯ ಹೊತ್ತಿಗೆ ಊಹೆಗೂ ನಿಲುಕದಷ್ಟು ಪಾತಾಳಕ್ಕಿಳಿದಿದೆ. ಬೆಳಿಗ್ಗೆಗಿಂತ ಸಂಜೆ ಬಂಗಾರ ಮತ್ತಷ್ಟು ಅಗ್ಗವಾಗಿದೆ.
ಹಾಗಾದರೆ, ಸಂಜೆಯ ಈ ಬೃಹತ್ ಕುಸಿತದ ಬಳಿಕ ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ? ನೀವು ಈ ಹೊಸ ರೇಟ್ ಕಾರ್ಡ್ ಒಮ್ಮೆ ಚೆಕ್ ಮಾಡಿ.
ಇಂದಿನ ಚಿನ್ನದ ಬೆಲೆ: Today Gold Rate 23-03-2026
22 ಕ್ಯಾರೆಟ್ (ಆಭರಣ ಚಿನ್ನ): ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ಭಾರಿ ಅಂದರೆ ₹9450 ಇಳಿಕೆಯಾಗಿದೆ.
- 1 ಗ್ರಾಂ ಬೆಲೆ: ₹12,435 (ನಿನ್ನೆಗಿಂತ ₹945 ಇಳಿಕೆ)
- 8 ಗ್ರಾಂ ಬೆಲೆ: ₹99,480 (ನಿನ್ನೆಗಿಂತ ₹7,560 ಇಳಿಕೆ)
- 10 ಗ್ರಾಂ ಬೆಲೆ: ₹1,24,350 (ಒಟ್ಟು ₹9,450 ಇಳಿಕೆ)
24 ಕ್ಯಾರೆಟ್ (ಶುದ್ಧ ಚಿನ್ನ): ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ಬರೋಬ್ಬರಿ ₹1,0320 ಕುಸಿದಿದೆ.
- 1 ಗ್ರಾಂ ಬೆಲೆ: ₹13,565 (ನಿನ್ನೆಗಿಂತ ₹1,032 ಇಳಿಕೆ)
- 8 ಗ್ರಾಂ ಬೆಲೆ: ₹1,08,520 (ನಿನ್ನೆಗಿಂತ ₹8,256 ಇಳಿಕೆ)
- 10 ಗ್ರಾಂ ಬೆಲೆ: ₹1,35,650 (ಒಟ್ಟು ₹10,320 ಇಳಿಕೆ)
18 ಕ್ಯಾರೆಟ್ (ಲೈಟ್ ವೆಟ್ ಚಿನ್ನ): ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹7740 ಕಡಿಮೆಯಾಗಿದೆ.
- 1 ಗ್ರಾಂ ಬೆಲೆ: ₹10,174 (ನಿನ್ನೆಗಿಂತ ₹774 ಇಳಿಕೆ)
- 10 ಗ್ರಾಂ ಬೆಲೆ: ₹1,01,740 (ಒಟ್ಟು ₹7,740 ಇಳಿಕೆ)
ಕೇವಲ ಒಂದೇ ದಿನದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ₹9,450 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹10,320 ಇಳಿಕೆಯಾಗಿದೆ. ಈಗ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಕೇವಲ ₹12,435 ಕ್ಕೆ ಮತ್ತು 24 ಕ್ಯಾರೆಟ್ ಬೆಲೆ ₹13,565 ಕ್ಕೆ ಬಂದಿದೆ. ದಿನದಿಂದ ದಿನಕ್ಕೆ ಬೆಲೆ ಈ ಮಟ್ಟಿಗೆ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ಬಂಗಾರ ಖರೀದಿಸಲು ದೊಡ್ಡ ಅವಕಾಶವನ್ನು ಸೃಷ್ಟಿಸಿದೆ.
(ಸೂಚನೆ: ಮೇಲಿನ ದರಗಳು 3% ಜಿಎಸ್‌ಟಿ (GST) ಮತ್ತು ಮಳಿಗೆಯ ಮೇಕಿಂಗ್ ಚಾರ್ಜಸ್ ಅನ್ನು ಒಳಗೊಂಡಿರುವುದಿಲ್ಲ. ನೀವು ಖರೀದಿಸುವ ಮಳಿಗೆಯ ಆಧಾರದ ಮೇಲೆ ಅಂತಿಮ ಬಿಲ್‌ನಲ್ಲಿ ದರ ಸ್ವಲ್ಪ ಬದಲಾಗಬಹುದು.)
- ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೇಮಕಾತಿ 2026
- ಇದನ್ನೂ ಓದಿ: Income Caste Certificate: ಜಾತಿ, ಆದಾಯ ಪತ್ರ ಮೊಬೈಲ್ನಲ್ಲೇ ಪಡೆಯಿರಿ