ಸೋಮವಾರವಷ್ಟೇ ಬರೋಬ್ಬರಿ ₹10,320 ಇಳಿಕೆಯಾಗಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದ ಚಿನ್ನದ ಬೆಲೆ, ಕೇವಲ 48 ಗಂಟೆಗಳಲ್ಲಿ ಮತ್ತೆ ಹಳೆಯ ರೇಟ್‌ಗೆ ಮರಳಿದೆ. ಆಭರಣ ಪ್ರಿಯರಿಗೆ ಇದೊಂದು ಆಘಾತಕಾರಿ ಸುದ್ದಿಯಾಗಿದ್ದು, ಇನ್ನಷ್ಟು ಬೆಲೆ ಇಳಿಯುತ್ತದೆ ಎಂದು ಖರೀದಿಸಲು ಕಾಯುತ್ತಿದ್ದವರಿಗೆ ಭಾರಿ ನಿರಾಸೆ ಮೂಡಿಸಿದೆ.
ಸೋಮವಾರದ (ಮಾರ್ಚ್ 23) ಕುಸಿತದ ದರಕ್ಕೆ ಹೋಲಿಸಿದರೆ, ಕೇವಲ ಎರಡು ದಿನಗಳಲ್ಲಿ 22 ಕ್ಯಾರೆಟ್ ಚಿನ್ನದ ಮೇಲೆ ಪ್ರತಿ 10 ಗ್ರಾಂಗೆ ಬರೋಬ್ಬರಿ ₹10,100 ಹೆಚ್ಚಳವಾಗಿದೆ.
ಹಾಗಾದರೆ, ಈ ದಿಢೀರ್ ಏರಿಕೆಯ ಬಳಿಕ ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ? ಸೋಮವಾರದ ದರಕ್ಕೆ ಹೋಲಿಸಿದರೆ ಎಷ್ಟು ದುಬಾರಿಯಾಗಿದೆ? ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ:
Today Gold Price 25-03-2026
22 ಕ್ಯಾರೆಟ್ (ಆಭರಣ ಚಿನ್ನ): ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ಬರೋಬ್ಬರಿ ₹10,100 ಏರಿಕೆಯಾಗಿದೆ.
- 1 ಗ್ರಾಂ ಬೆಲೆ: ₹13,445 (ಮಾರ್ಚ್ 23ರ ದರ ₹12,435 ಕ್ಕೆ ಹೋಲಿಸಿದರೆ ₹1,010 ಏರಿಕೆ)
- 8 ಗ್ರಾಂ ಬೆಲೆ: ₹1,07,560 (ಮಾರ್ಚ್ 23ರ ದರ ₹99,480 ಕ್ಕೆ ಹೋಲಿಸಿದರೆ ₹8,080 ಏರಿಕೆ)
- 10 ಗ್ರಾಂ ಬೆಲೆ: ₹1,34,450 (ಒಟ್ಟು ₹10,100 ಏರಿಕೆ)
24 ಕ್ಯಾರೆಟ್ (ಶುದ್ಧ ಚಿನ್ನ): ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ಬರೋಬ್ಬರಿ ₹11,020 ಹೆಚ್ಚಳವಾಗಿದೆ.
- 1 ಗ್ರಾಂ ಬೆಲೆ: ₹14,667 (ಮಾರ್ಚ್ 23ರ ದರ ₹13,565 ಕ್ಕೆ ಹೋಲಿಸಿದರೆ ₹1,102 ಏರಿಕೆ)
- 8 ಗ್ರಾಂ ಬೆಲೆ: ₹1,17,336 (ಮಾರ್ಚ್ 23ರ ದರ ₹1,08,520 ಕ್ಕೆ ಹೋಲಿಸಿದರೆ ₹8,816 ಏರಿಕೆ)
- 10 ಗ್ರಾಂ ಬೆಲೆ: ₹1,46,670 (ಒಟ್ಟು ₹11,020 ಏರಿಕೆ)
18 ಕ್ಯಾರೆಟ್ (ಲೈಟ್ ವೆಟ್ ಚಿನ್ನ): ಹಗುರ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹8,270 ದುಬಾರಿಯಾಗಿದೆ.
- 1 ಗ್ರಾಂ ಬೆಲೆ: ₹11,001 (ಮಾರ್ಚ್ 23ರ ದರ ₹10,174 ಕ್ಕೆ ಹೋಲಿಸಿದರೆ ₹827 ಏರಿಕೆ)
- 10 ಗ್ರಾಂ ಬೆಲೆ: ₹1,10,010 (ಒಟ್ಟು ₹8,270 ಏರಿಕೆ)
- ಇದನ್ನೂ ಓದಿ: PC-PSI Age Relaxation: ಗುಡ್ ನ್ಯೂಸ್: ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ
- ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೇಮಕಾತಿ 2026