ಪಿಎಂ ಕಿಸಾನ್ (PM Kisan) ಸೇರಿದಂತೆ ಸರ್ಕಾರದ ಕೃಷಿ ಯೋಜನೆಗಳ ಲಾಭ ಪಡೆಯಲು ಮತ್ತು ಹೊಸದಾಗಿ ‘ಸೆಂಟ್ರಲ್ ಫಾರ್ಮರ್ ಐಡಿ’ಸೃಜಿಸಲು ರೈತರು ‘ಫ್ರೂಟ್ಸ್’ (FRUITS e-KYC Karnataka) ತಂತ್ರಾಂಶದಲ್ಲಿ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ.
ಆದರೆ, ಇದಕ್ಕಾಗಿ ರೈತರು ತಮ್ಮ ಕೆಲಸ-ಕಾರ್ಯ ಬಿಟ್ಟು ರೈತ ಸಂಪರ್ಕ ಕೇಂದ್ರ ಅಥವಾ ಸೈಬರ್ ಸೆಂಟರ್ಗಳ ಮುಂದೆ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಸ್ವತಃ ರೈತರೇ ‘ಸಿಟಿಜನ್ ಲಾಗಿನ್’ (Citizen Login) ಮೂಲಕ ತಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್ ಬಳಸಿ, ಕೇವಲ 5 ನಿಮಿಷಗಳಲ್ಲಿ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ಅದು ಹೇಗೆ ಎನ್ನುವ ಸಂಪೂರ್ಣ ಮತ್ತು ಸರಳ ವಿಧಾನ ಇಲ್ಲಿದೆ.
ಖಾತೆ ಸೃಷ್ಟಿಸುವುದು ಹೇಗೆ?
ನೀವು ಈಗಾಗಲೇ ಫ್ರೂಟ್ಸ್ ಖಾತೆಯೆ ಹೊಂದಿದ್ದರೇ ಪೋರ್ಟಲ್ನಲ್ಲಿ ನೇರವಾಗಿ ಲಾಗಿನ್ ಮಾಡಬಹುದು. ಆದರೆ ನೀವು ಫ್ರೂಟ್ಸ್ ಐಡಿ ಹೊಂದಿಲ್ಲದಿದ್ದರೆ ನಿಮ್ಮದೇ ಆದ ಒಂದು ಖಾತೆಯನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು:
- ಮೊಬೈಲ್ನ ಗೂಗಲ್ ಕ್ರೋಮ್ನಲ್ಲಿ ‘FRUITS Login‘ ಎಂದು ಸರ್ಚ್ ಮಾಡಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ತೆರೆಯಿರಿ.
- ಮುಖಪುಟದಲ್ಲಿರುವ ‘Citizen Login’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಕೆಳಗಡೆ ‘Citizen Registration’ (ನಾಗರಿಕರ ನೋಂದಣಿ) ಎಂಬ ಲಿಂಕ್ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಒಪ್ಪಿಗೆ ಬಾಕ್ಸ್ಗೆ ಟಿಕ್ ಮಾಡಿ, ‘OTP’ ಆಯ್ಕೆಯನ್ನು ಆರಿಸಿಕೊಂಡು ‘Submit’ ಬಟನ್ ಒತ್ತಿ.
- ನಿಮ್ಮ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು (OTP) ಹಾಕಿ ದೃಢೀಕರಿಸಿ.
- ಕೊನೆಯದಾಗಿ, ನಿಮಗೆ ಸುಲಭವಾಗಿ ನೆನಪಿನಲ್ಲಿರುವಂತಹ ಹೊಸ ‘ಪಾಸ್ವರ್ಡ್’ (Password) ಅನ್ನು ಎರಡು ಬಾರಿ ಟೈಪ್ ಮಾಡಿ ‘Create Password’ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಖಾತೆ ಯಶಸ್ವಿಯಾಗಿ ಸೃಷ್ಟಿಯಾಗುತ್ತದೆ.
FRUITS e-KYC ಮಾಡುವುದು ಹೇಗೆ?
ನಿಮ್ಮ ಅಕೌಂಟ್ ಸೃಷ್ಟಿಯಾದ ನಂತರ ಮತ್ತೆ ‘Citizen Login’ ಮುಖಪುಟಕ್ಕೆ ಬನ್ನಿ:
- ನಿಮ್ಮ ಮೊಬೈಲ್ ನಂಬರ್, ಈಗಷ್ಟೇ ನೀವು ಸೆಟ್ ಮಾಡಿದ ಪಾಸ್ವರ್ಡ್ ಮತ್ತು ಅಲ್ಲಿ ಕಾಣುವ ಕ್ಯಾಪ್ಚಾ (Captcha) ಕೋಡ್ ಹಾಕಿ ಲಾಗಿನ್ (Login) ಆಗಿ. (ಲಾಗಿನ್ ಆಗುವಾಗಲೂ ನಿಮ್ಮ ಭದ್ರತೆಗಾಗಿ ಒಂದು OTP ಬರುತ್ತದೆ, ಅದನ್ನು ನಮೂದಿಸಿ).
- ಲಾಗಿನ್ ಆದ ಕೂಡಲೇ ನಿಮ್ಮ ಡ್ಯಾಶ್ಬೋರ್ಡ್ನಲ್ಲಿ ‘e-KYC’ ಮತ್ತು ‘Farmer Consent’ ಎಂಬ ಎರಡು ಪ್ರಮುಖ ಆಯ್ಕೆಗಳು ಕಾಣಿಸುತ್ತವೆ.
- ಮೊದಲು ‘e-KYC’ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, ಆಧಾರ್ ಒಟಿಪಿ (OTP) ಮೂಲಕ ದೃಢೀಕರಿಸಿದರೆ “e-KYC Successfully Updated” ಎಂಬ ಸಂದೇಶ ಬರುತ್ತದೆ. ಇಲ್ಲಿಗೆ ಇ-ಕೆವೈಸಿ ಮುಗಿಯಿತು.
ರೈತರ ಸಹಮತಿ ಪತ್ರ (Farmer Consent / e-Sign)
ಇ-ಕೆವೈಸಿ ಮುಗಿದ ತಕ್ಷಣ ಮಾಡಬೇಕಾದ ಅತಿ ಮುಖ್ಯವಾದ ಕೆಲಸವಿದು. ಇದನ್ನು ಮಾಡದಿದ್ದರೆ ನಿಮ್ಮ ಸೆಂಟ್ರಲ್ ಐಡಿ ರಚನೆಯಾಗುವುದಿಲ್ಲ:
- ಪೋರ್ಟಲ್ನಲ್ಲಿರುವ ‘Farmer Consent’ (ರೈತರ ಸಹಮತಿ ಪತ್ರ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಕೃಷಿ ಇಲಾಖೆಯ ಯೋಜನೆಗಳಿಗೆ ನಿಮ್ಮ ಆಧಾರ್ ಮಾಹಿತಿಯನ್ನು ಬಳಸಲು ಒಪ್ಪಿಗೆ ಸೂಚಿಸುವ ಅಧಿಕೃತ ಡಿಕ್ಲರೇಷನ್ (Declaration) ಅಲ್ಲಿರುತ್ತದೆ. ಅದನ್ನು ಓದಿ, ಕೆಳಗಿರುವ ಬಾಕ್ಸ್ಗೆ ‘ಟಿಕ್’ (✔️) ಮಾಡಿ.
- ನಂತರ ಅಲ್ಲಿಯೇ ಇರುವ ‘e-Sign’ (ಇ-ಸೈನ್) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಇದು ನಿಮ್ಮನ್ನು e-Sign ವೆಬ್ಪುಟಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ಮತ್ತೆ ನಿಮ್ಮ ಆಧಾರ್ ಸಂಖ್ಯೆ ಹಾಕಿ, OTP ನಮೂದಿಸಿ ಸಬ್ಮಿಟ್ ಮಾಡಿದರೆ, “e-Signed Farmer Consent Saved Successfully” ಎಂಬ ಸಂದೇಶ ಬರುತ್ತದೆ.
“ಕೇಂದ್ರ ಸರ್ಕಾರದ ‘ಸೆಂಟ್ರಲ್ ಫಾರ್ಮರ್ ಐಡಿ’ ಯಶಸ್ವಿಯಾಗಿ ಜನರೇಟ್ ಆಗಲು ಮುಖ್ಯವಾಗಿ ಬೇಕಿರುವುದು ಈ ‘e-KYC’ ಮತ್ತು ‘Farmer Consent’ ಮಾತ್ರ. ಈ ಎರಡು ಹಂತಗಳನ್ನು ನೀವು ಸರಿಯಾಗಿ ಮುಗಿಸಿದರೆ ನಿಮ್ಮ ಕೆಲಸ 100% ಪೂರ್ಣಗೊಂಡಂತೆ. ಜೊತೆಗೆ, ಇದೇ ಸಿಟಿಜನ್ ಲಾಗಿನ್ ಪೋರ್ಟಲ್ನಲ್ಲಿ ನೀವು ನಿಮ್ಮ ಹಳೆಯ ಮೊಬೈಲ್ ನಂಬರ್ ಬದಲಾಯಿಸಿ ಹೊಸ ನಂಬರ್ ಅನ್ನು ಕೂಡ ಅಪ್ಡೇಟ್ ಮಾಡಿಕೊಳ್ಳುವ ಅವಕಾಶವಿದೆ.”
ಇದನ್ನೂ ಓದಿ: ಮಾರ್ಚ್ 1 ರಿಂದ ಬದಲಾಗಲಿವೆ ಈ 5 ಪ್ರಮುಖ ನಿಯಮಗಳು