ಆರ್ಥಿಕ ಸಮಸ್ಯೆಯಿಂದಾಗಿ ಉನ್ನತ ಶಿಕ್ಷಣ ಪಡೆಯಲು ಪರದಾಡುತ್ತಿರುವ ಬಡ ಹಾಗೂ ಪ್ರತಿಭಾವಂತರಿಗೆ ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿ ‘ವಿವೋ ಇಂಡಿಯಾ’ (Vivo India) ಆಶಾಕಿರಣವಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ (STEM) ಕ್ಷೇತ್ರದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿನಿಯರ ಭವಿಷ್ಯವನ್ನು ಉಜ್ವಲಗೊಳಿಸಲು ‘ವಿವೋ ಕನ್ಯಾಜ್ಞಾನ್ ವಿದ್ಯಾರ್ಥಿವೇತನ 2025-26’ (VIVO KanyaGyan Scholarship) ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿನಿಯರಿಗೆ ಸತತ ಮೂರು ವರ್ಷಗಳ ಕಾಲ ವಾರ್ಷಿಕ ಬರೋಬ್ಬರಿ ₹60,000 ಆರ್ಥಿಕ ನೆರವು ಸಿಗಲಿದ್ದು, ನಿಗದಿತ ಕೊನೆಯ ದಿನಾಂಕದೊಳಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ಪ್ರತಿಷ್ಠಿತ ಸ್ಕಾಲರ್ಶಿಪ್ಗೆ ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳೇನು? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಏನಿದು ‘ವಿವೋ ಕನ್ಯಾಜ್ಞಾನ್’ ಸ್ಕಾಲರ್ಶಿಪ್?
ಇದು ವಿವೋ ಇಂಡಿಯಾ ಕಂಪನಿಯ ಸಿಎಸ್ಆರ್ (CSR) ಉಪಕ್ರಮವಾಗಿದ್ದು, ಸೌಲಭ್ಯ ವಂಚಿತ ಯುವತಿಯರನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಗುರಿ ಹೊಂದಿದೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಕೇವಲ ಆರ್ಥಿಕ ನೆರವು ಮಾತ್ರವಲ್ಲದೆ, ಭವಿಷ್ಯದ ವೃತ್ತಿಜೀವನಕ್ಕೆ (Corporate Readiness) ನೆರವಾಗುವ ಮಾರ್ಗದರ್ಶನ ಹಾಗೂ ಉದ್ಯಮ ಸಂಪರ್ಕವನ್ನೂ ಈ ಕಾರ್ಯಕ್ರಮ ಒದಗಿಸುತ್ತದೆ.
ಯಾವೆಲ್ಲಾ ಖರ್ಚುಗಳಿಗೆ ಹಣ ಸಿಗಲಿದೆ? ವರ್ಷಕ್ಕೆ ಸಿಗುವ 60,000 ರೂ. ಸ್ಕಾಲರ್ಶಿಪ್ ಹಣವನ್ನು ವಿದ್ಯಾರ್ಥಿನಿಯರು ತಮ್ಮ ಕಾಲೇಜು ಶುಲ್ಕ, ಹಾಸ್ಟೆಲ್/ಪಿಜಿ ಬಾಡಿಗೆ, ಊಟದ ಖರ್ಚು, ಸಾರಿಗೆ, ಹಾಗೂ ಲ್ಯಾಪ್ಟಾಪ್ ಅಥವಾ ಅಗತ್ಯ ಉಪಕರಣಗಳನ್ನು ಖರೀದಿಸಲು ಬಳಸಿಕೊಳ್ಳಬಹುದು (ಇದಕ್ಕೆ ಸಂಬಂಧಿಸಿದ ಬಿಲ್ಗಳನ್ನು ಪರಿಶೀಲನೆಗೆ ಒದಗಿಸಬೇಕು).
Vivo Scholarship 2026 ಅರ್ಹತೆಗಳು:
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಷರತ್ತುಗಳನ್ನು ಪೂರೈಸಿರಬೇಕು:
- ಕೋರ್ಸ್: ಭಾರತದಾದ್ಯಂತ ಎನ್ಐಆರ್ಎಫ್ (NIRF) ಶ್ರೇಯಾಂಕಿತ ಕಾಲೇಜುಗಳಲ್ಲಿ ಪೂರ್ಣಾವಧಿ STEM ಪದವಿ ಕೋರ್ಸ್ಗಳಾದ (B.Tech / BE, B.Sc, BCA ಇತ್ಯಾದಿ) ಮೊದಲ ಅಥವಾ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರು ಮಾತ್ರ ಅರ್ಹರು. (ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ).
- ಅಂಕಗಳು: ವಿದ್ಯಾರ್ಥಿನಿಯು 10ನೇ ತರಗತಿ, 12ನೇ ತರಗತಿ (ಪಿಯುಸಿ) ಹಾಗೂ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಸೆಮಿಸ್ಟರ್ನಲ್ಲಿ ಕನಿಷ್ಠ ಶೇ. 70ರಷ್ಟು ಅಂಕಗಳನ್ನು ಪಡೆದಿರಬೇಕು.
- ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹5 ಲಕ್ಷವನ್ನು ಮೀರಿರಬಾರದು.
- ಗಮನಿಸಿ: ವಿವೋ ಇಂಡಿಯಾ ಅಥವಾ ಬಡ್ಡಿ4ಸ್ಟಡಿ (Buddy4Study) ಉದ್ಯೋಗಿಗಳ ಮಕ್ಕಳು ಹಾಗೂ ಈಗಾಗಲೇ ಬೇರೆ ಯಾವುದೇ ವಿದ್ಯಾರ್ಥಿವೇತನ ಅಥವಾ ಸರ್ಕಾರಿ ಯೋಜನೆಯಡಿ ‘ಸಂಪೂರ್ಣ’ ಆರ್ಥಿಕ ನೆರವು ಪಡೆಯುತ್ತಿರುವವರು ಈ ಯೋಜನೆಗೆ ಅರ್ಹರಲ್ಲ.
ಆಯ್ಕೆ ಪ್ರಕ್ರಿಯೆಯಲ್ಲಿ ಇವರಿಗೆ ಮೊದಲ ಆದ್ಯತೆ:
ಈ ಕೆಳಗಿನ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡುವಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ:
- ತಂದೆ ಅಥವಾ ತಾಯಿಯನ್ನು ಕಳೆದುಕೊಂಡವರು (ಒಂಟಿ-ಪೋಷಕ/ಅನಾಥ ಮಕ್ಕಳು).
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (SC/ST) ಹಾಗೂ ಅಧಿಸೂಚಿತ ಬುಡಕಟ್ಟು ಜನಾಂಗದವರು.
- ಕುಟುಂಬದಲ್ಲೇ ಮೊದಲ ಬಾರಿಗೆ ಕಾಲೇಜು ಮೆಟ್ಟಿಲೇರುತ್ತಿರುವವರು (First-generation learners).
- ಪೊಲೀಸ್/ಸಶಸ್ತ್ರ ಪಡೆಗಳು ಅಥವಾ ಹುತಾತ್ಮ ಯೋಧರ ಕುಟುಂಬದ ಮಕ್ಕಳು.
- ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕ್ರೀಡೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿನಿಯರು.
ಬೇಕಾಗುವ ಪ್ರಮುಖ ದಾಖಲೆಗಳು:
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ.
- ಮಾನ್ಯತೆ ಪಡೆದ ಗುರುತಿನ ಚೀಟಿ (ಆಧಾರ್, ಪ್ಯಾನ್, ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ).
- ಪ್ರಸ್ತುತ ವರ್ಷದ ಕಾಲೇಜು ಶುಲ್ಕದ ರಸೀದಿ (Fee Structure) ಮತ್ತು ಅಡ್ಮಿಷನ್ ಲೆಟರ್ ಅಥವಾ ಐಡಿ ಕಾರ್ಡ್.
- 10ನೇ, 12ನೇ ತರಗತಿ ಹಾಗೂ ಹಿಂದಿನ ಸೆಮಿಸ್ಟರ್ನ ಅಂಕಪಟ್ಟಿಗಳು.
- ಪೋಷಕರ ಆದಾಯ ಪ್ರಮಾಣಪತ್ರ.
- ಬ್ಯಾಂಕ್ ಪಾಸ್ಬುಕ್ ಪ್ರತಿ (ವಿದ್ಯಾರ್ಥಿಯ ಅಥವಾ ಪೋಷಕರೊಂದಿಗಿನ ಜಾಯಿಂಟ್ ಅಕೌಂಟ್).
- ಜಾತಿ, ಕ್ರೀಡೆ, ಅಂಗವೈಕಲ್ಯ ಅಥವಾ ಅಂಚಿನಲ್ಲಿರುವ ಸಮುದಾಯಕ್ಕೆ ಸೇರಿದ ಪ್ರಮಾಣಪತ್ರ (ಅನ್ವಯಿಸಿದರೆ ಮಾತ್ರ).
- ಬೇರೆ ಯಾವುದೇ ಸ್ಕಾಲರ್ಶಿಪ್ ಪಡೆಯುತ್ತಿಲ್ಲ ಎಂಬ ಅಧಿಕೃತ ಘೋಷಣಾ ಪತ್ರ.
- “ನಾನು ಈ ಕೋರ್ಸ್ ಅನ್ನು ಏಕೆ ಆಯ್ಕೆ ಮಾಡಿಕೊಂಡಿದ್ದೇನೆ? ಹಾಗೂ ಈ ಸ್ಕಾಲರ್ಶಿಪ್ ನನ್ನ ಭವಿಷ್ಯಕ್ಕೆ ಹೇಗೆ ಸಹಾಯ ಮಾಡಲಿದೆ?” ಎಂಬುದರ ಬಗ್ಗೆ 200 ಪದಗಳ ಮಿತಿಯಲ್ಲಿ ಬರೆದ ಒಂದು ಕಿರು ಪ್ರಬಂಧವನ್ನು (Personal Statement) ಕಡ್ಡಾಯವಾಗಿ ಸಲ್ಲಿಸಬೇಕು.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2026
ಪ್ರಮುಖ ಲಿಂಕ್ಗಳು:
VIVO KanyaGyan Scholarship 2026 Apply Online Link: Apply ಮಾಡಿ
“ತಾಂತ್ರಿಕ ಶಿಕ್ಷಣ (STEM) ಪಡೆಯುತ್ತಿರುವ ಪ್ರತಿಭಾವಂತ ಬಡ ವಿದ್ಯಾರ್ಥಿನಿಯರಿಗೆ ಇದು ನಿಜಕ್ಕೂ ಬಂಪರ್ ಅವಕಾಶ. ದಾಖಲೆಗಳ ಪರಿಶೀಲನೆ ಬಳಿಕ ಆಯ್ಕೆ ಸಮಿತಿಯು ನಡೆಸುವ ಅಂತಿಮ ಸಂದರ್ಶನದ ಮೂಲಕ ಅರ್ಹರನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಕೊನೆಗಳಿಗೆಯ ಸರ್ವರ್ ಸಮಸ್ಯೆ ತಪ್ಪಿಸಲು, ಮಾರ್ಚ್ 3 ರ ಗಡುವಿಗೂ ಮುನ್ನವೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.”
ಇದನ್ನೂ ಓದಿ: 10th, PUC ಪಾಸಾದವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉದ್ಯೋಗವಕಾಶ