LPG Gas Booking New Rules: ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮ ದಿಢೀರ್ ಬದಲು: ಇನ್ಮುಂದೆ ಸಿಲಿಂಡರ್ ಪಡೆಯಲು ಇಷ್ಟು ದಿನ ಕಾಯಲೇಬೇಕು

Telegram Group Join Now
WhatsApp Group Join Now

ಅಡುಗೆ ಅನಿಲ (LPG) ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರವು ಹೊಸದೊಂದು ಅಪ್‌ಡೇಟ್ ನೀಡಿದೆ. ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್‌ಗಳು ಮಾರಾಟವಾಗುವುದನ್ನು ತಡೆಗಟ್ಟಲು ಹಾಗೂ ಪ್ರತಿಯೊಬ್ಬ ಸಾಮಾನ್ಯ ಗ್ರಾಹಕನಿಗೂ ಯಾವುದೇ ಅಡೆತಡೆಯಿಲ್ಲದೆ ಸಿಲಿಂಡರ್ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಬುಕಿಂಗ್ ನಿಯಮವನ್ನು ಬದಲಾಯಿಸಿದೆ.

ನೀವು ಹೊಸ ಸಿಲಿಂಡರ್ ಬುಕ್ ಮಾಡುವ ಮುನ್ನ ಈ ಬದಲಾದ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ:

21 ದಿನಗಳ ಮಿತಿ ಈಗ 25 ದಿನಕ್ಕೆ ಏರಿಕೆ! ಹೊಸ ಮಾರ್ಗಸೂಚಿಯ ಪ್ರಕಾರ, ಗ್ರಾಹಕರು ಒಂದು ಬಾರಿ ಗ್ಯಾಸ್ ಸಿಲಿಂಡರ್ ಡೆಲಿವರಿ ಪಡೆದರೆ, ಮುಂದಿನ 25 ದಿನಗಳ ಕಾಲ ಮತ್ತೊಂದು ಸಿಲಿಂಡರ್ ಪಡೆಯಲು ಅವಕಾಶವಿರುವುದಿಲ್ಲ. ಈ ಹಿಂದೆ ಎರಡು ಸಿಲಿಂಡರ್ ಬುಕಿಂಗ್ ನಡುವಿನ ಕನಿಷ್ಠ ಅಂತರವನ್ನು 21 ದಿನಗಳಿಗೆ ನಿಗದಿಪಡಿಸಲಾಗಿತ್ತು. ಇದೀಗ ಆ ಬುಕಿಂಗ್ ಗ್ಯಾಪ್ ಅನ್ನು 25 ದಿನಗಳಿಗೆ ವಿಸ್ತರಿಸಲಾಗಿದೆ.

ಗ್ಯಾಸ್ ಕೊರತೆ ಇದೆಯಾ? ಅಧಿಕಾರಿಗಳು ಏನಂತಾರೆ? ಬುಕಿಂಗ್ ಅವಧಿ ವಿಸ್ತರಣೆಯಾದ ತಕ್ಷಣ, ಮಾರುಕಟ್ಟೆಯಲ್ಲಿ ಗ್ಯಾಸ್ ಕೊರತೆ (Shortage) ಇದೆಯಾ ಎಂದು ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ದೇಶಾದ್ಯಂತ ಸಾಕಷ್ಟು ಅಡುಗೆ ಅನಿಲದ ದಾಸ್ತಾನು ಸುರಕ್ಷಿತವಾಗಿದೆ ಎಂದು ಇಲಾಖೆಯ ಮೂಲಗಳು ಅಭಯ ನೀಡಿವೆ. ಜೊತೆಗೆ, ಮನೆಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಗ್ಯಾಸ್ ಹಾಗೂ ವಾಹನಗಳ ಸಿಎನ್‌ಜಿ (CNG) ಕೇಂದ್ರಗಳು ಮತ್ತು ಪೆಟ್ರೋಲ್ ಬಂಕ್‌ಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಂಕಿ-ಅಂಶಗಳ ಪ್ರಕಾರ, ನಮ್ಮ ದೇಶದಲ್ಲಿ ಒಂದು ಕುಟುಂಬಕ್ಕೆ ವರ್ಷಕ್ಕೆ ಸರಾಸರಿ 8 ಸಿಲಿಂಡರ್‌ಗಳು ಬೇಕಾಗುತ್ತವೆ. ಅಂದರೆ ಒಂದು ಸಿಲಿಂಡರ್ ಕನಿಷ್ಠ 6 ವಾರಗಳ ಕಾಲ (ಒಂದೂವರೆ ತಿಂಗಳು) ಬರುತ್ತದೆ. ಹೀಗಾಗಿ 25 ದಿನಗಳ ಹೊಸ ಮಿತಿಯಿಂದ ನಿಜವಾದ ಗೃಹಬಳಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಸರ್ಕಾರದ ಲೆಕ್ಕಾಚಾರ.

Telegram Group Join Now
WhatsApp Group Join Now

Leave a Comment